Publish Date: Tue, 26 Sep 2017 (07:26 IST)
Updated Date: Tue, 26 Sep 2017 (07:29 IST)
ಕಲಬುರ್ಗಿ: ಸೀಮೆ ಎಣ್ಣೆ ಸ್ಟೌವ್ ಸಿಡಿದು ಮೂವರು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಫತ್ತು ನಾಯಕ ತಾಂಡಾದಲ್ಲಿ ನಡೆದಿದೆ.
ರಿತೇಶ್(5), ಪ್ರೀತಂ(3), ರಿತಿಕಾ(3) ಮೃತ ಮಕ್ಕಳು. ಅಕ್ಷತಾ ಮತ್ತು ವೀರಶೆಟ್ಟಿ ನಾಯಕ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಇವರ ಪರಿಸ್ಥಿತಿಯು ಚಿಂತಾಜನಕವಾಗಿದೆ. ಗಾಯಾಳುಗಳನ್ನು ಬೀದರ್ ನ ಚಿಟಗುಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರೀತಂ ಹಾಗೂ ರಿತಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಿತೇಶ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇಡೀ ತಾಂಡಾವೇ ಶೋಕದಲ್ಲಿ ಮುಳುಗಿದೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ಭೇಟಿ ನೀಡಿದ್ದರು.