Select Your Language

Notifications

webdunia
webdunia
webdunia
webdunia

ಲಂಡನ್ನಿನ ಬಕೆಟ್ ಬಾಂಬ್ ದಾಳಿಯ ಹೊಣೆ ಹೊತ್ತ ಐಸಿಸ್

ಲಂಡನ್ನಿನ ಬಕೆಟ್ ಬಾಂಬ್ ದಾಳಿಯ ಹೊಣೆ ಹೊತ್ತ ಐಸಿಸ್
ಲಂಡನ್ , ಶನಿವಾರ, 16 ಸೆಪ್ಟಂಬರ್ 2017 (12:46 IST)
ಲಂಡನ್ನಿನ ಅಂಡರ್ ಗ್ರೌಂಡ್ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನ ಇರಾಕ್`ನ ಐಸಿಸ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ. ಅಮಾಕ್ ಪ್ರಾಪಗ್ಯಾಂಡ ಏಜೆನ್ಸಿಯಲ್ಲಿ ಐಸಿಸ್ ಪ್ರಕಟಣೆ ಪ್ರಕಟವಾಗಿದೆ.

ಸುಧಾರಿತ ಸ್ಪೊಟಕ ಬಳಸಿ ಲಂಡನ್ನಿನ ಮೆಟ್ರೋ ಸ್ಟೇಶನ್ನಿನಲ್ಲಿ ಶುಕ್ರವಾರ ನಡೆಸಿರುವ ಸ್ಫೋಟದಲ್ಲಿ 29 ಮಂದಿ ಗಾಯಗೊಂಡಿದ್ದರು. ಮುಖ ಮತ್ತು ಕೈಕಾಲುಗಳ ಸುಟ್ಟ ಗಾಯಗಳಿಂದ ಸಂತ್ರಸ್ತರು ಹಿಂಸೆ ಅನುಭವಿಸಿದ್ದರು. ಈ ವರ್ಷ ಬ್ರಿಟನ್ನಿನಲ್ಲಿ ನಡೆದ 5ನೇ ಮತ್ತು ಲಂಡನ್ನಿನ 4ನೇ ಬಾಂಬ್ ದಾಳಿ ಇದಾಗಿದ್ದು, ಗಮಾನಾರ್ಹ ಹಾನಿ ಉಂಟು ಮಾಡುವುದೇ ಇದರ ಉದ್ದೇಶವಾಗಿದೆ ಎಂದು ಪ್ರಧಾನ ಮಂತ್ರಿ ತೆರೆಸಾ ಮೇ ಹೇಳಿದ್ದಾರೆ.

 ಪಾರ್ಸನ್ ಗ್ರೀನ್ ಸುರಂಗ ನಿಲ್ದಾಣದಲ್ಲಿ ಈ ಸ್ಫೋಟ ಸಂಭವಿಸಿದ್ದು,  ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಸಮೀಪದಲ್ಲಿ ದೊಡ್ಡ ಸ್ಫೋಟದ ಸದ್ದು ಕೇಳಿಸಿತು. ಬೆಂಕಿ ಉಂಡೆಗಳು ಹಾರಲಾಂಭಿಸಿದವು. ಬಕೆಟ್ ಬಾಂಬ್ ಸ್ಫೋಟಗೊಂಡು ಹಲವರಿಗೆ ಸುಟ್ಟ ಗಾಯಗಳಾದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಯೂರೋಪ್ ರಾಷ್ಟ್ರಗಳ ಮೇಲೆ ಕೆಂಡ ಕಾರುವ ಐಸಿಸ್ ಉಗ್ರರು ನಮ್ಮ ವಿಧ್ವಂಸಕ ಕೃತ್ಯಗಳನ್ನ ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ. ಲಂಡನ್ನಿನಲ್ಲಿ ಎಷ್ಟೇ ಭದ್ರತೆ ಕೈಗೊಂಡರೂ ದಾಳಿ ನಿಲ್ಲುವುದಿಲ್ಲ ಎಂದು ಹೇಳಿಕೊಂಡಿದ್ಧಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪರಮೇಶ್ವರ್ ಬಿಟ್ಟ ಅಸ್ತ್ರಕ್ಕೆ ತತ್ತರಿಸಿದ ಸಿಎಂ ಸಿದ್ದರಾಮಯ್ಯ...