Select Your Language

Notifications

webdunia
webdunia
webdunia
webdunia

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಅಟೋ ಚಾಲಕನ ಬಂಧನ

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಅಟೋ ಚಾಲಕನ ಬಂಧನ
ಬೆಂಗಳೂರು , ಬುಧವಾರ, 27 ಸೆಪ್ಟಂಬರ್ 2017 (19:28 IST)
ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಟೋರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಟೋರಿಕ್ಷಾ ಚಾಲಕ 28 ವರ್ಷ ವಯಸ್ಸಿನ ರಾಜೇಶ್, ಕೆಂಪಾಪುರ ಬಡಾವಣೆಯ ನಿವಾಸಿಯಾಗಿದ್ದು, ಲೈಂಗಿಕ ದೌರ್ಜನ್ಯವೆಸಗಿದ ಬಾಲಕಿಯರ ಕುಟುಂಬಗಳಿಗೆ ಚಿರಪರಿಚಿತನಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.   
 
ಕಳೆದ ಸೆಪ್ಟೆಂಬರ್ 23 ರಂದು ಬಾಲಕಿಯರ ಮನೆಗೆ ಆಗಮಿಸಿದ ರಾಜೇಶ್, ಮನೆ ಬಳಿ ಆಡುತ್ತಿದ್ದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಪೋಷಕರು ಮನೆಗೆ ಮರಳಿದ ನಂತರ ಬಾಲಕಿಯರು ರಾಜೇಶ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
 
ಇಬ್ಬರು ಬಾಲಕಿಯರ ಎರಡು ಕುಟುಂಬಗಳು ಪೊಲೀಸ್ ಠಾಣೆಯಲ್ಲಿ ಆರೋಪಿ ರಾಜೇಶ್ ವಿರುದ್ಧ ನೀಡಿದ ದೂರಿನ ಮೇರೆಗೆ ರಾಜೇಶ್‌ನನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವರುಣ್ ಗಾಂಧಿಯಲ್ಲಿ ನೆಹರು ಸಿದ್ಧಾಂತಗಳಿವೆ, ಬಿಜೆಪಿಗೆ ಅನರ್ಹ: ದಿಗ್ವಿಜಯ್ ಸಿಂಗ್