Publish Date: Mon, 30 Oct 2023 (14:02 IST)
Updated Date: Mon, 30 Oct 2023 (14:09 IST)
ನಗರದ ವೀರ ಭದ್ರದ ನಗರದಲ್ಲಿ ಅಗ್ನಿ ಅವಘಡ ನಡೆದಿದೆ.ನಿಂತಿರುವ ಬಸ್ ಗಳಿಗೆ ಬೆಂಕಿ ತಗುಲಿದೆ.ಘಟನ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಯಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ನೋಡು ನೋಡುತ್ತಿದ್ದಂತೆ ಬಸ್ ಗಳಿಗೆ ಬೆಂಕಿ ತಗ್ಗಲಿದ್ದು,ಕ್ಷಣಮಾತ್ರದಲ್ಲಿ ಬಸ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ.9 ಬಸ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸ್ ವಿ ಕೋಚ್ ಅನ್ನುವ ಹೆಸ್ರಲ್ಲಿ ಗ್ಯಾರೇಜ್ ನಡೆಸಲಾಗ್ತಿತ್ತು. ಕಟ್ಟಿಂಗ್ ಹಾಗೂ ವೆಲ್ಡಿಂಗ್ ಮಷಿನ್ ಗಳನ್ನ ಬಳಸಿ ಕೆಲಸ ಮಾಡಲಾಗುತ್ತೆ.ಈಗ ಬೆಂಕಿ ಹೊತ್ತಿಕೊಂಡಿದ್ದು ,ಪೊಲೀಸರು ತನಿಖೆ ಶುರುಮಾಡಿದ್ದಾರೆ.