Select Your Language

Notifications

webdunia
webdunia
webdunia
webdunia

ಪ್ರಧಾನ ಮಂತ್ರಿಯ ಸ್ಥಾನದ ಗರಿಮೆ ಕಳಾಹೀನಗೊಳ್ಳುತ್ತಿದೆ: ಶರದ್ ಪವಾರ್

Sharad Pawar, PM Modi
bangalore , ಸೋಮವಾರ, 30 ಅಕ್ಟೋಬರ್ 2023 (13:51 IST)
ಆರ್‌ಎಸ್ಎಸ್ ಸಿದ್ಧಾಂತವನ್ನು ಪ್ರಸಾರ ಮಾಡಲು ದೂರದರ್ಶನವನ್ನು ಬಳಸಿಕೊಂಡಿದ್ದಕ್ಕೆ ಕೇಂದ್ರ ಸರಕಾರದ ಮೇಲೆ ಕಟು ವಾಗ್ದಾಳಿ ನಡೆಸಿದ ಪವಾರ್, ಒಬ್ಬರ ಸಿದ್ಧಾಂತವನ್ನು ಜನರ ಮೇಲೆ ಬಲವಂತವಾಗಿ ಹೇರುವುದು ಆತಂಕವನ್ನು ಉಂಟು ಮಾಡುವಂತಹ ವಿಚಾರ.  ಪ್ರಧಾನಿ ಪದವಿಯ ಪ್ರತಿಷ್ಠೆಯನ್ನು ತಗ್ಗಿಸುತ್ತಿದ್ದಾರೆ ಎಂದು ಶರದ್ ಪವಾರ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
 ಇಂತಹ ಸಂದರ್ಭಗಳಲ್ಲಿ ಸಾಮಾಜಿಕ ಸಮಾನತೆ ಅಪಾಯದಡಿ ಸಿಲುಕಿಕೊಳ್ಳುತ್ತದೆ. ಬಿಜೆಪಿ ವಿರೋಧಿ ರಂಗ ಅಸ್ತಿತ್ವಕ್ಕೆ ಬಂದರೆ ನಾನದಕ್ಕೆ ಬೆಂಬಲ ನೀಡುತ್ತೇನೆ. ಆದರೆ, ನಾನಾಗಿಯೇ ಈ ಕಾರ್ಯದ  ಎಂದು ಹೇಳಿದ್ದಾರೆ. 
 
ತಮ್ಮ ಪ್ರಾಬಲ್ಯವಿರುವ ಬಾರಾಮತಿ ಕ್ಷೇತ್ರದಲ್ಲಿನ ಜನರನ್ನು ಶರದ್ ಪವಾರ್  "ಗುಲಾಮ" ರಂತೆ ನಡೆಸಿಕೊಳ್ಳುತ್ತಾರೆ  ಎಂದು ಪ್ರಧಾನಿ ನರೇಂದ್ರ ಮೋದಿ  ಆರೋಪ ಮಾಡಿದ್ದಕ್ಕೆ ಪ್ರತಿ ದಾಳಿ ನಡೆಸಿರುವ ಎನ್‌ಸಿಪಿ ಮುಖ್ಯಸ್ಥ  ಮೋದಿ ವೈಯಕ್ತಿಕ ದಾಳಿ ನಡೆಸುವುದರ ಚರ್ಚೆಯ ಮೌಲ್ಯವನ್ನು ಕಡಿಮೆ ಮಾಡುತ್ತಿದ್ದಾರೆ ಅಲ್ಲದೇ ಪ್ರಧಾನಿ ಪದವಿಯ ಪ್ರತಿಷ್ಠೆಯನ್ನು ತಗ್ಗಿಸುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ. 
 
 
ಮುಂಬೈನಲ್ಲಿ ಮಾತನಾಡುತ್ತಿದ್ದ ಪವಾರ್ " ಮೋದಿಯವರು ವೈಯಕ್ತಿಕ ದಾಳಿಯ ಭಾಷಣಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಈ ರೀತಿಯ ಮಾತುಗಳಿಂದ ಪ್ರಧಾನ ಮಂತ್ರಿಯ ಸ್ಥಾನದ ಗರಿಮೆ ಕಳಾಹೀನಗೊಳ್ಳುತ್ತಿದೆ ಮತ್ತು ಸಾರ್ವಜನಿಕ ಚರ್ಚೆಯ ಮೌಲ್ಯ ಕುಂಠಿತವಾಗುತ್ತಿದೆ  " ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹವಾಗಲು ಒಪ್ಪಿಕೊಂಡ ಯುವತಿಯರಿಗೆ ಬ್ಲಾಕ್ಮೇಲ್: ಆರೋಪಿ ಬಂಧನ