Publish Date: Sat, 14 Oct 2023 (20:19 IST)
Updated Date: Sat, 14 Oct 2023 (18:40 IST)
ಟ್ರಾನ್ಸ್ಪರ್ಮರ್ ಬ್ಲಾಸ್ಟ್ ಆಗಿ ಬೆಂಕಿ ತಗ್ಗಲಿರುವ ಘಟನೆ ನಗರದ ಲಗ್ಗೆರೆ ಪ್ರೀತಿ ಬಾರ್ ಬಳಿ ನಡೆದಿದೆ.ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಯಿಸಿದ್ದು,ಶಾರ್ಟ್ ಸರ್ಕ್ಯೂಟ್ ನಿಂದ ಟ್ರಾನ್ಸ್ಫಾರ್ಮರ್ ಬ್ಲಾಸ್ಟ್ ಆಗಿರೋ ಶಂಕೆ ವ್ಯಕ್ತವಾಗಿದೆ.ಪಕ್ಕದಲ್ಲಿದ್ದ ಗುಜುರಿ ಅಂಗಡಿಗೆ ಬೆಂಕಿ ತಗುಲಿದ್ದು,ಸದ್ಯ ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.ಯಾವುದೇ ಪ್ರಾಣಾಪಾಯವಾಗಿಲ್ಲ.ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಭಂದ ಐದು ಬೈಕ್ ಸುಟ್ಟು ಕರಕಲಾಗಿದೆ.ಗುಜುರಿ ಪಕ್ಕದಲ್ಲಿದ್ದ ಎರಡು ಮನೆಗೆ ಬೆಂಕಿ ತಗುಲಿದೆ.ಮನೆಯಲ್ಲಿದ್ದವರು ತಕ್ಷಣ ಹೊರಬಂದಿದ್ದಾರೆ.ಸದ್ಯ ನಾಲ್ಕು ಅಗ್ನಿಶಾಮಕ ದಾಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.