Publish Date: Mon, 03 Apr 2023 (20:35 IST)
Updated Date: Mon, 03 Apr 2023 (20:30 IST)
ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ KRPP ಸಂಸ್ಥಾಪಕ ಜನಾರ್ದನ ರೆಡ್ಡಿ ಸೇರಿದಂತೆ 5 ಜನರ ವಿರುದ್ಧ FIR ದಾಖಲಾಗಿದೆ. ಪಕ್ಷದ ಪೋಸ್ಟರ್ ಜೊತೆಗೆ ಉಚಿತ ಸೇವೆ ಎಂದು ಆಂಬುಲೆನ್ಸ್ ಮೇಲೆ ಬರೆಯಲಾಗಿತ್ತು. ಕನಕಗಿರಿಯ ಡಾ. B.R. ಅಂಬೇಡ್ಕರ್ ವೃತ್ತದಲ್ಲಿ ಈ ವಾಹನವನ್ನು ಪೊಲೀಸರು ಎರಡು ದಿನಗಳ ಹಿಂದೆ ಜಪ್ತಿ ಮಾಡಿದ್ದರು. ಕನಕಗಿರಿ ಕ್ಷೇತ್ರದ ಪಕ್ಷದ ನಿಯೋಜಿತ ಅಭ್ಯರ್ಥಿ ವೆಂಕಟರಮಣ ದಾಸರಿ, ಆಂಬುಲೆನ್ಸ್ ವಾಹನದ ಮಾಲೀಕ ಜಿ. ನವೀನಕುಮಾರ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣಾ ಮತ್ತು ಆಂಬುಲೆನ್ಸ್ ಚಾಲಕನ ವಿರುದ್ಧ FIR ದಾಖಲಾಗಿದೆ. ವಾಹನದ ಮೇಲೆ ರೆಡ್ಡಿ, ಅರುಣಾ ಮತ್ತು ದಾಸರಿ ಭಾವಚಿತ್ರಗಳು ಇದ್ದವು. ಅನುಮತಿ ಪಡೆಯದೇ ಕಲ್ಯಾಣ ಪ್ರಗತಿ ಪಕ್ಷಕ್ಕೆ ಸೇರಿದ ವಾಹನ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿತ್ತು. ಆದ್ದರಿಂದ FIR ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.