Publish Date: Mon, 03 Apr 2023 (19:40 IST)
Updated Date: Mon, 03 Apr 2023 (19:41 IST)
ಕೊಪ್ಪಳದಲ್ಲಿ ಜನಮತವಿರದ ಹಾಲಿ ಶಾಸಕರಿಗೆ BJP ಟಿಕೆಟ್ ಮಿಸ್ ಆಗುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕೋ ಸಾಧ್ಯತೆ ಹೆಚ್ಚಾಗಿದೆ. ಕನಕಗಿರಿ ಕ್ಷೇತ್ರದ BJP ಹಾಲಿ ಶಾಸಕ ಬಸವರಾಜ ದಡೇಸುಗೂರು ಪರ ಜನ ಒಲವು ಹೊಂದಿಲ್ಲ. ಈ ಹಿನ್ನೆಲೆಯಲ್ಲಿ BJP ಹೈಕಮಾಂಡ್ ಬೇರೆ ಮುಖಕ್ಕೆ ಮಣೆ ಹಾಕಲಿದೆ ಎನ್ನಲಾಗಿದೆ. ಶಾಸಕ ಬಸವರಾಜ್ ದಡೇಸುಗೂರು ಮೇಲೆ ಅನೇಕ ಆರೋಪಗಳಿದ್ದು, ಈ ಹಿನ್ನೆಲೆಯಲ್ಲಿ ಟಿಕೆಟ್ ನೀಡದಿರಲು BJP ಚಿಂತನೆ ನಡೆಸಿದೆ ಎನ್ನಲಾಗಿದೆ.. BJP ಟಿಕೆಟ್ ಆಕಾಂಕ್ಷಿಗಳಾದ ಗಾಯಿತ್ರಿ ತಿಮ್ಮಾರೆಡ್ಡಿ ಅಥವಾ ಧರ್ಮಣ್ಣಗೆ ಟಿಕೆಟ್ ಫೈನಲ್ ಆಗೋ ಸಾಧ್ಯತೆ ಇದೆ.. BJP ಈಗಾಗಲೇ ಕ್ಷೇತ್ರದಲ್ಲಿ ಸರ್ವೆ ಮಾಡಿದೆ. ಬಿಜೆಪಿ ಸರ್ವೇಯಲ್ಲಿ ಮೊದಲ ಸ್ಥಾನದಲ್ಲಿರೋರಿಗೆ ಟಿಕೆಟ್ ಫೈನಲ್ ಮಾಡಲು BJP ವರಿಷ್ಠರು ತಯಾರಿ ನಡೆಸಿದ್ದಾರೆ.