Publish Date: Mon, 03 Apr 2023 (18:31 IST)
Updated Date: Mon, 03 Apr 2023 (18:53 IST)
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ BJP ಅಭ್ಯರ್ಥಿ ಆಯ್ಕೆಗೆ ಸರ್ಕಸ್ ನಡೆಸುತ್ತಿದೆ.. ರಾಜ್ಯ ಕೋರ್ ಕಮಿಟಿ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದೆ.. ಈಗಾಗಲೇ ಎರಡು ದಿನಗಳ ಕಾಲ ಜಿಲ್ಲಾ ಕೋರ್ ಕಮಿಟಿ, ರಾಜ್ಯ ಕೋರ್ ಕಮಿಟಿ ಜೊತೆಗೆ ಸಭೆ ನಡೆಸಿದ್ದು, 224 ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸಿರುವ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿದೆ.. ರಾಜ್ಯದ ಕೋರ್ ಕಮಿಟಿಯು ಪ್ರತಿ ಕ್ಷೇತ್ರಕ್ಕೆ ಒಬ್ಬರು ಪ್ರಬಲ ಅಭ್ಯರ್ಥಿ ಹೆಸರು ಅಂತಿಮ ಮಾಡಲಿದ್ದು, ಅಂತಿಮ ಮಾಡಿದ ಹೆಸರಗಳನ್ನು ಬಿಜೆಪಿ ಹೈಕಮಾಂಡ್ಗೆ ಕಳಿಸಲಾಗುತ್ತದೆ.. ಹೈಕಮಾಂಡ್ ಮಾಡಿರುವ ಸರ್ವೆ ಮತ್ತು ರಾಜ್ಯದಿಂದ ಬಂದ ಪಟ್ಟಿ ಪರಾಮರ್ಶೆ ಮಾಡಿದ ನಂತರ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಬಿಜೆಪಿ ಮೊದಲ ಪಟ್ಟಿ ಅಂತಿಮ ಮಾಡಲಿದೆ.. ಬಿಜೆಪಿ ಮೊದಲ ಪಟ್ಟಿಯಲ್ಲಿ 130 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ.. ಏಪ್ರಿಲ್ 9ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ.... ಅಂದೇ ಮೊದಲ ಪಟ್ಟಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.