Select Your Language

Notifications

webdunia
webdunia
webdunia
webdunia

ಏ. 3ಕ್ಕೆ 100 ‘ಕೈ’ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?

ಏ. 3ಕ್ಕೆ 100 ‘ಕೈ’ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?
bangalore , ಶುಕ್ರವಾರ, 31 ಮಾರ್ಚ್ 2023 (17:40 IST)
ರಾಜ್ಯ ವಿಧಾನಸಭೆ ಚುನಾಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ಚುನಾವಣ ತಯಾರಿ ಚಟುವಟಿಕೆ ಬಿರುಸು ಪಡೆದಿವೆ.. ಕಾಂಗ್ರೆಸ್​ ಈಗಾಗಲೇ ಟಿಕೆಟ್​​​​ ಮೊದಲ ಪಟ್ಟಿ ರಿಲೀಸ್ ಮಾಡಿದ್ದು, ಎರಡನೇ ಪಟ್ಟಿಗಾಗಿ ತಯಾರಿ ಮಾಡಿಕೊಂಡಿದೆ.. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕುದುರೆಗಾಗಿ ಹುಡುಕಾಟ ನಡೆಸಲಾಗಿದೆ. AICC ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಪಟ್ಟಿಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಏಪ್ರಿಲ್‌ 3ಕ್ಕೆ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆಯಿದ್ದು, KPCC ಶಿಫಾರಸು ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಾ ಕಾದುನೋಡಬೇಕಿದೆ.. ಈಗಾಗಲೇ 50 ಅಭ್ಯರ್ಥಿಗಳ ಲಿಸ್ಟ್‌ ರೆಡಿಯಾಗಿದ್ದು, ಮುರ್ನಾಲ್ಕು ಹಂತಗಳಲ್ಲಿ ಪಟ್ಟಿ ರಿಲೀಸ್ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 3ನೇ ಹಂತದಲ್ಲಿ BJP, JDSನಿಂದ ಬರುವವರಿಗೆ ಮಣೆ ಹಾಕಲಾಗುತ್ತದೆ. ನಾಮಪತ್ರ ಪರಿಶೀಲನೆಯವರೆಗೆ ಕಾದು ನೋಡುವ ತಂತ್ರಕ್ಕೆ ಕಾಂಗ್ರೆಸ್​​ ಮುಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವ ಸಾಧ್ಯತೆಯಿಲ್ಲ. ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದ ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ಟಿಕೆಟ್‌ ಫಿಕ್ಸ್ ಆಗಿದ್ದು, ಶಾಸಕ ಶಿವಲಿಂಗೇಗೌಡ, N.Y.ಗೋಪಾಲಕೃಷ್ಣ ಕೂಡ ಕಾಂಗ್ರೆಸ್​​​ ಪಡೆ ಸೇರುವ ಸಾಧ್ಯತೆಯಿದೆ.. ಜೊತೆಗೆ JDS, BJP ರೆಬೆಲ್‌ ನಾಯಕರು ಕಾಂಗ್ರೆಸ್‌ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಆತಂಕ ಕಾಂಗ್ರೆಸ್​​, JDSನ ನಾಯಕರಿಗೆ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ A.T. ರಾಮಸ್ವಾಮಿ JDSಗೆ ರಾಜೀನಾಮೆ