Select Your Language

Notifications

webdunia
webdunia
webdunia
webdunia

ಕೊರೊನಾ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಎಫ್ ಐ ಆರ್

ಕೊರೊನಾ ಸುಳ್ಳು ಸುದ್ದಿ
ಕೊರೊನಾ ವೈರಸ್ ಕುರಿತು ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕೇಸ್ ದಾಖಲು ಮಾಡುವಂತೆ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ.

ಕೆ. ಆರ್. ಪೇಟೆ ದೊಡ್ಡ ಹಾರೋಹಳ್ಳಿ ಗ್ರಾಮದಲ್ಲಿ 50 ಮಂದಿ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಬಿತ್ತರವಾಗುತ್ತಿದೆ.

ಈ ಸಂಬಂಧ ಜಿಲ್ಲಾಧಿಕಾರಿಗಳ ಆದೇಶ  ಅನ್ವಯ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ಆರೋಗ್ಯಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಗ್ರಾಮದಲ್ಲಿ 434 ಜನಸಂಖ್ಯೆ ಇದ್ದು 82 ಮನೆಗಳ ಪ್ರತಿಯೊಬ್ಬರನ್ನು ಆರೋಗ್ಯ  ತಪಾಸಣೆ ಮಾಡಲಾಗಿದೆ. ಕೊರೋನಾ ಸಂಬಂಧ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದು ವರದಿಯನ್ನು ಆರೋಗ್ಯ ಸಿಬ್ಬಂದಿ ನೀಡಿರುತ್ತಾರೆ.

ಹೀಗಾಗಿ ಈ ಸಂಬಂಧ ಸಾರ್ವಜನಿಕರು ಯಾವುದೇ  ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಕೆ.ಆರ್.ಪೇಟೆ ದೊಡ್ಡ ಹಾರೋಹಳ್ಳಿ ಗ್ರಾಮದ ಕೆಲವು ಕಿಡಿಗೇಡಿಗಳು ಈ ರೀತಿಯ ವದಂತಿಗಳನ್ನು ಹಬ್ಬಿಸಿದ್ದು  ಅವರ ಕುಟುಂಬದ ಸದಸ್ಯರಿಂದ ಈ ಸುಳ್ಳು ಸುದ್ದಿಗಳನ್ನು, ವದಂತಿಗಳನ್ನು ಹಬ್ಬಿಸಿರುತ್ತಾರೆ.

ಸುಳ್ಳು ಸುದ್ದಿ ಹಬ್ಬಿಸದವರ ಮೇಲೆ ಎಫ್ಐಆರ್ ದಾಖಲು ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಕಂಟೈನ್‌ಮೆಂಟ್ ಜೋನ್ ಗೆ ಎಂಟ್ರಿಕೊಟ್ಟ ಸಚಿವ