Publish Date: Sat, 05 Nov 2022 (17:09 IST)
Updated Date: Sat, 05 Nov 2022 (17:17 IST)
ಅನುಮತಿ ಇಲ್ಲದೆ ಕೆಜಿಎಫ್ ಹಿಂದಿ ಹಾಡಿನ ಬಳಕೆ ಮಾಡಿದ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.ಎಂ ಆರ್ ಟಿ ಮ್ಯೂಸಿಕ್ ಕೆ.ಜಿ.ಎಫ್ ಹಿಂದಿ ವರ್ಷನ್ ಹಾಡುಗಳ ಮಾಲೀಕರಾದ ನವೀನ್ ಕುಮಾರ್ ದೂರು ನೀಡಿದ್ದಾರೆ.ಅನುಮತಿ ಇಲ್ಲದೆ ಹಾಡನ್ನ ಎಡಿಟ್ ಮಾಡಿ ಭಾರತ್ ಜೋಡೋಗೆ ಬಳಕೆ ಮಾಡಿದ್ದಾರೆ.ಐಪಿಸಿ, ಕಾಪಿರೈಟ್ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಕೇಸ್ ದಾಖಲಾಗಿದೆ.ಜೈರಾಮ್ ರಮೇಶ್, ಸುಪ್ರಿತಾ ಶ್ರಿನಾಥ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಾಗಿದೆ.ipc 120b,403, 465, copyright act 63, IT acr 66 ಅಡಿ ಎಫ್ಐಆರ್ ಕೇಸ್ ದಾಖಲಿಸಲಾಗಿದೆ.