Select Your Language

Notifications

webdunia
webdunia
webdunia
webdunia

ಕೊನೆಗೂ ಬಯಲಾಯ್ತು ಶಿರೂರು ಶ್ರೀಗಳ ಸಾವಿನ ರಹಸ್ಯ

ಶಿರೂರು
ಉಡುಪಿ , ಬುಧವಾರ, 22 ಆಗಸ್ಟ್ 2018 (14:29 IST)
ಉಡುಪಿ: ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವು ಈಗ  ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯ ಮೂಲಕ ಸಹಜ ಸಾವು ಎನ್ನಲಾಗಿದೆ.


ಶಿರೂರು ಸ್ವಾಮೀಜಿಯವರ ಸಾವಿನ ಮಾಹಿತಿ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದರು. ಈ ಎರಡೂ ವರದಿಗಳನ್ನು ಹೋಲಿಕೆ ಮಾಡಿ ಅಂತಿಮ ವರದಿಯನ್ನು ಕೆಎಂಸಿ ವೈದ್ಯರು ನೀಡಲಿದ್ದಾರೆ. ಮರಣೋತ್ತರ ಪರೀಕ್ಷೆ ಅಂತಿಮ ವರದಿ ಎಫ್.ಎಸ್.ಎಲ್ ಇಂದು ಅಥವಾ ನಾಳೆ ಬರುವ ಸಾಧ್ಯತೆಯಿದೆ.


ಮರಣೋತ್ತರ ವರದಿಯಲ್ಲಿ ಸಹಜ ಸಾವು ಎಂಬ ಉಲ್ಲೇಖವಿದೆ ಎನ್ನಲಾಗಿದೆ. ಶ್ರೀಗಳ ದೇಹದಲ್ಲಿ ವಿಷದ ಅಂಶವಿಲ್ಲ ಎಂಬ ವರದಿ ಪೊಲೀಸರ ಕೈಸೇರಿರುವ ಸಾಧ್ಯತೆ ಇದೆ. ಎರಡು ವರದಿ ಬಂದ ಬಳಿಕ ಸ್ವಾಮೀಜಿ ಸಾವಿಗೆ ಕಾರಣವನ್ನು ಮಣಿಪಾಲ ವೈದ್ಯರು ಪೊಲೀಸರಿಗೆ ವಿವರಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಕಷ್ಟದಲ್ಲಿ ನೆರವಾದ ಯೋಧರಿಗೆ ಸೆಲ್ಯೂಟ್ ಮಾಡಿ ಬೀಳ್ಕೊಡುತ್ತಿರುವ ಪ್ರವಾಹ ಪೀಡಿತರು!