Select Your Language

Notifications

webdunia
webdunia
webdunia
webdunia

ಸಂಕಷ್ಟದಲ್ಲಿ ನೆರವಾದ ಯೋಧರಿಗೆ ಸೆಲ್ಯೂಟ್ ಮಾಡಿ ಬೀಳ್ಕೊಡುತ್ತಿರುವ ಪ್ರವಾಹ ಪೀಡಿತರು!

ಸಂಕಷ್ಟದಲ್ಲಿ ನೆರವಾದ ಯೋಧರಿಗೆ ಸೆಲ್ಯೂಟ್ ಮಾಡಿ ಬೀಳ್ಕೊಡುತ್ತಿರುವ ಪ್ರವಾಹ ಪೀಡಿತರು!
ತಿರುವನಂತರಪುರಂ , ಬುಧವಾರ, 22 ಆಗಸ್ಟ್ 2018 (10:57 IST)
ತಿರುವನಂತರಪುರಂ: ಸುತ್ತಲೂ ನೀರು.. ಎಲ್ಲಿ ಹೋಗುವುದು ಹೇಗೆ ಹೋಗುವುದು ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ನೆರವಾದ ನಮ್ಮ ಹೆಮ್ಮೆಯ ಸೇನಾ ಸಿಬ್ಬಂದಿಗೆ ಇದೀಗ ಪ್ರವಾಹ ಪೀಡಿತ ಜನ ಧನ್ಯವಾದ ಸಮರ್ಪಿಸುತ್ತಿದ್ದಾರೆ.

ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ ಗರ್ಭಿಣಿಯರು, ವೃದ್ಧರು, ಮಕ್ಕಳು ಸೇರಿದಂತೆ ಸಂತ್ರಸ್ತರನ್ನು ಸಾಹಸ ಮಾಡಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ಯೋಧರಿಗೆ ಮರಳುವಾಗ ಅಲ್ಲಿನ ಸಂತ್ರಸ್ತರು ಸೆಲ್ಯೂಟ್ ಮಾಡಿ ತಮ್ಮ ಕೃತಜ್ಞತೆ ಸಲ್ಲಿಸುತ್ತಿರುವ ದೃಶ್ಯ ಇದೀಗ ಕೇರಳದಲ್ಲಿ ಸಾಮಾನ್ಯವಾಗಿದೆ.

ಕೆಲವೆಡೆ ಕಾರ್ಯಾಚರಣೆ ಮುಗಿಸಿ ತೆರಳುತ್ತಿರುವ ಯೋಧರಿಗೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿ ಸೆಲ್ಯೂಟ್ ಹೊಡೆದು ಜನಸಾಮಾನ್ಯರು ಬೀಳ್ಕೊಡುತ್ತಿದ್ದಾರೆ. ನಮ್ಮ ಸೈನಿಕರಲ್ಲವೇ ನಿಜವಾದ ಹೀರೋಗಳು?!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರೇವಣ್ಣ ಬಿಸ್ಕತ್ ಎಸೆದಿದ್ದು ತಪ್ಪಾದರೆ, ಬಿಎಸ್ ವೈ ಚಾಕುವಿನಲ್ಲಿ ಕೇಕ್ ತಿನಿಸಿದ್ದು ತಪ್ಪಲ್ಲವೇ? ರೇವಣ್ಣ ಅಭಿಮಾನಿಗಳ ಫೋಟೋ ವಾರ್!