Select Your Language

Notifications

webdunia
webdunia
webdunia
webdunia

ಮಗುವಿನ ಅಳು ಸಹಿಸದ ತಾಯಿ ಮಾಡಿದ್ದಾಳೆ ಇಂತಹ ನೀಚ ಕೃತ್ಯ

ಮಗುವಿನ ಅಳು ಸಹಿಸದ ತಾಯಿ ಮಾಡಿದ್ದಾಳೆ ಇಂತಹ ನೀಚ ಕೃತ್ಯ
ಠಾಣೆ , ಸೋಮವಾರ, 13 ಆಗಸ್ಟ್ 2018 (14:25 IST)
ಠಾಣೆ : ಮಗು ಅತ್ತರೆ ತನ್ನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಓಡೋಡಿ ಬಂದು ಮಗುವನ್ನು ಎತ್ತಿಕೊಂಡು ಅದಕ್ಕೆ ಸಮಾಧಾನ ಮಾಡುವ ತಾಯಂದಿರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ತಾಯಿ ತಾನು ಹೆತ್ತ ಮಗುವಿನ ಅಳುವನ್ನು ಕೇಳಲಾಗದೆ ಮಾಡಿದ ನೀಚ ಕೃತ್ಯವನ್ನು ಕೇಳಿದರೆ ಆಕೆಯ ಬಗ್ಗೆ ಅಸಹ್ಯ ಹುಟ್ಟುತ್ತದೆ.


ಹೌದು. ಭೀವಂಡಿಯ ಧಪ್ಸಿಪಾಡ ಗ್ರಾಮದ ಕಲ್ಪನಾ ಗಾಯಕ್ವಾಡ್ ಎಂಬಾಕೆ ಅನಾರೋಗ್ಯದಲ್ಲಿದ್ದ ತನ್ನ ಆರು ತಿಂಗಳ ಮಗು ನಿರಂತರವಾಗಿ ಅಳುವುದನ್ನು ಸಹಿಸಲಾಗದೆ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ಆಕೆಯ ಮಗು ರಿಶಬ್ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ. ಇದರಿಂದ ಆತ ಹೆಚ್ಚು ಹಠಮಾಡುತ್ತಿದ್ದ. ಇದಕ್ಕೆ ರೋಸಿ ಹೋದ ತಾಯಿ ಕಲ್ಪನಾ ನೀರಿನಲ್ಲಿ ಮುಳುಗಿಸಿ ಮಗುವನ್ನು ಕೊಲೆ ಮಾಡಿದ್ದಾಳೆ.


ಅಷ್ಟೇ ಅಲ್ಲದೇ ನಂತರ ತಾನು ಮಾಡಿದ ಈ ನೀಚ ಕೆಲಸಕ್ಕೆ ಪಶ್ಚತಾಪ ಪಡದೆ ಅದನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದಾಳೆ.  ಅನುಮಾನಗೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದು, ತನಿಖೆ ವೇಳೇ ಪೊಲೀಸರಿಗೆ ಇದೊಂದು ಕೊಲೆ ಎಂದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತನೋರ್ವ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಮಾಡಿದ ಪ್ಲಾನ್​ ಏನು ಗೊತ್ತಾ?