Publish Date: Thu, 16 Feb 2023 (13:13 IST)
Updated Date: Thu, 16 Feb 2023 (13:16 IST)
ಕುಣಿಗಲ್ನಲ್ಲಿ ಅರ್ಹರಿಗೆ ನೀಡುವ ಪಡಿತರ ಅಕ್ಕಿಯಲ್ಲಿ ರಸಗೊಬ್ಬರ ಮಿಶ್ರಣವಾಗಿದ್ದು, ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಅಮೃತೂರಿನಲ್ಲಿ ಘಟನೆ ನಡೆದಿದ್ದು, ಫಲಾನುಭವಿಗಳು ರಾತ್ರೋರಾತ್ರಿ ಅಕ್ಕಿಯನ್ನು ವಾಪಸ್ ಮಾಡಿದ್ದಾರೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ದೂರವಾಣಿ ಮೂಲಕ ಆಹಾರ ತನಿಖಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಈಗ ನೀಡಿರುವ ಪಡಿತರ ಬದಲು ಹೊಸ ಅಕ್ಕಿ ನೀಡುವಂತೆ ತನಿಖಾಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ ಸೋಮವಾರ ಪಾವಗಡದಲ್ಲೂ ಇದೇ ರೀತಿ ಪ್ರಕರಣ ನಡೆದಿತ್ತು, ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಜನರು ಯೋಚನೆಯಲ್ಲಿಯೇ ಕಾಲ ದೂಡುವಂತಾಗಿದೆ.