Publish Date: Wed, 15 Feb 2023 (20:10 IST)
Updated Date: Wed, 15 Feb 2023 (20:13 IST)
ಕಾಂಗ್ರೆಸ್ ಬಿಜೆಪಿ ಮೇಲೆ ಟೆಂಡರ್ ಆರೋಪ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಲೇವಡಿ ಮಾಡಿರುವ ಮಾಜಿ ಸಿಎಂ ಯಡಿಯೂರಪ್ಪ, ಮತದಾರರ ಮನವೊಲಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ, ಆ ಪ್ರಯತ್ನ ಮಾಡಿದ್ರೆ ಮಾತ್ರ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಸಾಧ್ಯ. ಮತ್ತೆ ನಾವು ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ನಮಗೆ ಆದರ್ಶ. ಯಂಕ, ನಾಣಿ, ಸೀನನನ್ನು ಇಟ್ಟುಕೊಂಡು ನಾಯಕತ್ವ ಕೊಡೋಕೆ ಸಾಧ್ಯಾನಾ? ಎಂದು ಕಾಂಗ್ರೆಸ್ ನಾಯಕತ್ವದ ಬಗ್ಗೆ ಬಿಎಸ್ವೈ ಲೇವಡಿ ಮಾಡಿದ್ದಾರೆ. ಪಕ್ಷದ ಬೆನ್ನೆಲುಬಾಗಿ ನಾವೆಲ್ಲರೂ ಕೆಲಸ ಮಾಡಬೇಕು ಸಣ್ಣಪುಟ್ಟ ಅಸಮಾಧಾನ ಸ್ವಾಭಾವಿಕ. ಖಂಡಿತವಾಗಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣ್ತಿದ್ದಾರೆ, ನಾಯಕತ್ವ ಇಲ್ಲದೆ ಪರದಾಡುವ ಪಕ್ಷ ಕಾಂಗ್ರೆಸ್ ಪಾರ್ಟಿ ನಮ್ಮದಲ್ಲ ಎಂದು ಬಿಎಸ್ವೈ ಸಿದ್ದು ಮತ್ತು ಡಿಕೆಶಿಗೆ ತಿರುಗೇಟು ನೀಡಿದ್ದಾರೆ.