Publish Date: Wed, 15 Feb 2023 (20:04 IST)
Updated Date: Wed, 15 Feb 2023 (20:07 IST)
ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಆರ್ ಅಶೋಕ ಅವರು ಆ ಜವಾಬ್ದಾರಿಯನ್ನು ತ್ಯಜಿಸಿರುವ ಕತೆ ನಿಮಗೆ ಗೊತ್ತಿದೆ. ಅದಕ್ಕೂ ಮೊದಲು, ಜಿಲ್ಲೆಯ ಹಲವಾರು ಭಾಗಗಳಲ್ಲಿ ಅಶೋಕ ಗೋ ಬ್ಯಾಕ್ ಅಂತ ಹಲವು ಅಭಿಯಾನಗಳು ನಡೆದಿದ್ದವು. ಇದೇ ಹಿನ್ನೆಲೆಯಲ್ಲಿ ಕೆ.ಆರ್. ಪೇಟೆ ಶಾಸಕ ಮತ್ತು ಸಚಿವ ಕೆ.ಸಿ.ನಾರಾಯಣಗೌಡ ಅವರು ಕ್ಷೇತ್ರದ ಸಂತೆಬಾಚಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ತಮಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವುದು ಬೇಕಿಲ್ಲ ಎಂದರು. ಹಾಗಾದರೆ ಅವರು ಯಾವುದಾದರೂ ಅಭ್ಯರ್ಥಿಯನ್ನು ಸೂಚಿಸುತ್ತಾರಾ ಅಂತ ಕೇಳಿದ್ದಕ್ಕೆ, ಪಕ್ಷದಲ್ಲಿ ತಾನಿನ್ನೂ ಚಿಕ್ಕವ, ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರಲ್ಲದೆ, ಪುನಃ ಅಶೋಕ ಅವರನ್ನೇ ಹೈಕಮಾಂಡ್ ನೇಮಕ ಮಾಡಿದರೂ ನಿರ್ಧಾರವನ್ನು ಸ್ವಾಗತಿಸುವುದಾಗಿ ನಾರಾಯಣಗೌಡ ಹೇಳಿದರು.