Publish Date: Wed, 15 Feb 2023 (19:46 IST)
Updated Date: Wed, 15 Feb 2023 (19:49 IST)
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ JDS ಪಂಚರತ್ನ ಯಾತ್ರೆ ಇಂದು ಹಾವೇರಿ ಜಿಲ್ಲೆಗೆ ಕಾಲಿಟ್ಟಿದೆ.
ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಿಂದ ಆರಂಭವಾಗಿರುವ ಯಾತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದಾರೆ. ರಾಣೆಬೆನ್ನೂರಿನಲ್ಲಿ ಕುಮಾರಸ್ವಾಮಿ JDS ಅಭ್ಯರ್ಥಿ ಮಂಜುನಾಥ್ ಪರ ಪ್ರಚಾರ ಮಾಡುತ್ತಿದ್ದಾರೆ. ರೋಡ್ ಶೋ ಬಳಿಕ ಬಹಿರಂಗ ಸಭೆ ನಡೆಸಲಿರುವ ಕುಮಾರಸ್ವಾಮಿ, ರಾಣೆಬೇನ್ನೂರು ಕ್ಷೇತ್ರದಲ್ಲಿ JDS ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.