Select Your Language

Notifications

webdunia
webdunia
webdunia
webdunia

EDಯಿಂದ ಎಂ.ಶಿವಶಂಕರ್ ಬಂಧನ

M. Sivashankar arrested by eD
bangalore , ಬುಧವಾರ, 15 ಫೆಬ್ರವರಿ 2023 (18:59 IST)
ಲೈಫ್​​​​​ ಮಿಷನ್​​​​​ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಕಚೇರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ಇ.ಡಿ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ. ಯುಎಇ ಕಾನ್ಸುಲೇಟ್ ಮೂಲಕ ರೆಡ್ ಕ್ರೆಸೆಂಟ್ ನೀಡಿದ 18.50 ಕೋಟಿ ರೂ. ಹಾಗೂ 14.50 ಕೋಟಿ ರೂ. ಖರ್ಚು ಮಾಡಿ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ 140 ಕುಟುಂಬಗಳಿಗೆ ಲೈಫ್ ಮಿಷನ್ ಯೋಜನೆಯ ಮೂಲಕ ಮನೆ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಯೋಜನೆಗೆ ಈ ಪ್ರಕರಣ ಸಂಬಂಧಿಸಿದೆ. ಉಳಿದ ಮೊತ್ತವನ್ನು ಬಳಸಿಕೊಂಡು ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ. ಯೋಜನೆಗಾಗಿ ಸ್ವಪ್ನಾ ಸುರೇಶ್ ಸೇರಿದಂತೆ ಆರೋಪಿಗಳು 4.48 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಯುನಿಟಾಕ್ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಈಪನ್ ಮಾಹಿತಿ ನೀಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು 3ನೇ ದಿನದ ವೈಮಾನಿಕ ಪ್ರದರ್ಶನ