Publish Date: Wed, 15 Feb 2023 (19:07 IST)
Updated Date: Wed, 15 Feb 2023 (19:09 IST)
ವಿಧಾನಸಭಾ ಚುನಾವಣೆಗೆ ಕೇಸರಿ ಪಡೆ ಭರ್ಜರಿ ತಯಾರಿ ನಡೆಸುತ್ತಿದ್ದು, ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಬಿಜೆಪಿ ನಾಯಕರಿಂದ ಸಾಲು ಸಾಲು ಸಭೆಗಳು ನಡೆಯುತ್ತಿವೆ. ಖಾಸಗಿ ಹೋಟೆಲ್ನಲ್ಲಿ BJP ಚುನಾವಣಾ ಉಸ್ತುವಾರಿಗಳ ಸಭೆ ನಡೆದಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ BSY, ರಾಜ್ಯಾಧ್ಯಕ್ಷ ಕಟೀಲ್ ಭಾಗಿಯಾಗಿದ್ದು, ಸಭೆಯಲ್ಲಿ 224 ಕ್ಷೇತ್ರಗಳ ಉಸ್ತುವಾರಿಗಳು ಸಹ ಭಾಗಿಯಾಗಿದ್ದಾರೆ. ಸಭೆಯಲ್ಲಿ ಕ್ಷೇತ್ರಗಳ ಚುನಾವಣಾ ಉಸ್ತುವಾರಿಗಳ ಜೊತೆಗೆ ಮಹತ್ವದ ಚರ್ಚೆಯನ್ನ ಮಾಡಲಾಗಿದೆ.