Select Your Language

Notifications

webdunia
webdunia
webdunia
webdunia

ಬೋನಿಗೆ ಬಿದ್ದ ಮತ್ತೊಂದು ಚಿರತೆ

Another leopard that fell for Bonnie
ಮೈಸೂರು , ಗುರುವಾರ, 16 ಫೆಬ್ರವರಿ 2023 (13:10 IST)
ರಾಜ್ಯಾದ್ಯಂತ ವನ್ಯ ಜೀವಿಗಳ ಉಪಟಳ ಜಾಸ್ತಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಚಿರತೆಗಳ ಭೀತಿ ಜಾಸ್ತಿಯಾಗಿದ್ದು, ಮೈಸೂರಿನ ಟಿ. ನರಸೀಪುರ ತಾಲ್ಲೂಕಿನ ಮುಸುವಿನ ಕೊಪ್ಪಲು ಗ್ರಾಮದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಇರಿಸಿದ್ದ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ. ಈ ಹಿಂದೆಯು ಮುಸುವಿನ ಕೊಪ್ಪಲು ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಬೋನಿಗೆ ಎರಡು ಚಿರತೆಗಳು ಬಿದ್ದಿದ್ದವು. ಇದೀಗ ಮತ್ತದೇ ಸ್ಥಳದಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ಈಗಾಗಲೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ಮೈಸೂರಿನ ಅರಣ್ಯ ಭವನಕ್ಕೆ ರವಾನಿಸಲಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ರೀತಿ ಸಿದ್ದರಾಮಯ್ಯ ಹತ್ಯೆ ಮಾಡಬೇಕು ಅನ್ನೋ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವಥ್ ನಾರಾಯಣ್