Daily Horoscope

Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮಂಗನ ಕಾಯಿಲೆ ಆತಂಕ!

ಮಂಗನ ಕಾಯಿಲೆ
ಬೆಂಗಳೂರು :ಕಳೆದ ಒಂದು ತಿಂಗಳಲ್ಲಿ 3157 ಮಂದಿಗೆ ಮಂಗನ ಕಾಯಿಲೆ  ಪರೀಕ್ಷೆ ನಡೆಸಲಾಗಿದ್ದು 76 ಮಂದಿಗೆ ಸೋಂಕು ತಗುಲಿರುವುದು ಸ್ಪಷ್ಟವಾಗಿತ್ತು. ಕಳೆದ 24 ಗಂಟೆಯಲ್ಲಿ 6 ಮಂದಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಮತ್ತೆ ಆತಂಕ ಸೃಷ್ಟಿಸಿದೆ. ಒಟ್ಟಾರೆ ಪರೀಕ್ಷೆಗೊಳಗಾದ 145 ಮಂದಿಯಲ್ಲಿ 6 ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. 
 
 ರಾಜ್ಯದಲ್ಲಿ 21 ಸಕ್ರಿಯ ಪ್ರಕರಣಗಳು ಇದ್ದು, ಆರೋಗ್ಯ ಇಲಾಖೆ ಸೂಚಿಯಂತೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಮಂಗನ ಕಾಯಿಲೆ ತಡೆಗಟ್ಟಲು ಆರೋಗ್ಯ ಇಲಾಖೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಪಟ್ಟಿ ನೀಡಿದೆ.
 
• ಕಾಡು, ತೋಟದಿಂದ ಬಂದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು
 
• ಧರಿಸಿದ ಬಟ್ಟೆಯನ್ನು ಬಿಸಿ ನೀರಿನಲ್ಲಿ ನೆನೆಸಿ ಸೋಪಿನಿಂದಾ ತೊಳೆಯುವುದು

• ಕಾಡಿಗೆ ಹೋಗುವಾಗ ಸುರಕ್ಷತೆಗಾಗಿ ಮೈ ತುಂಬ ಬಟ್ಟೆ ಧರಿಸುವುದು
 
• ಕಾಡು ಅಥವಾ ತೋಟಕ್ಕೆ ಹೋಗುವಾಗ DEPA ಉಣ್ಣೆ ವಿಕರ್ಷಕ ತೈಲ ಲೇಪಿಸಿಕೊಳ್ಳುವುದು
 
• ಕಾಡಿನಿಂದ ಮನೆಗೆ ಉಣ್ಣೆ ಬರದಂತೆ ಸುರಕ್ಷತಾ ಕ್ರಮವಹಿಸಬೇಕು
 
• ಜಾನುವಾರುಗಳ ಮೈಯಿಂದ ಉಣ್ಣೆ ತೆಗೆದು,ಉಣ್ಣೆ ನಿವಾರಕ ತೈಲ ಲೇಪಿಸಬೇಕು. ಉಣ್ಣೆ ನಿವಾರಕ ತೈಲವನ್ನು ಕೊಟ್ಟಿಗೆ ಹಾಗೂ ಸುತ್ತಮುತ್ತ ಸಿಂಪಡಿಬೇಕು
 
• ಮಂಗಗಳು ಸತ್ತಿರುವುದು ಕಂಡು ಬಂದರೆ ಗ್ರಾಮ ಪಂಚಾಯತಿ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು
 

Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರಿನಲ್ಲಿ ತಮ್ಮ ಸಂಚಾರ ಮುಂದುವರೆಸಿದ ಸೋಮಣ್ಣ