Select Your Language

Notifications

webdunia
webdunia
webdunia
webdunia

ಸಂಸದರು ರಾಜ್ಯಕ್ಕೆ ಏನು ಉಪಕಾರ ಮಾಡಿದ್ದಾರೆ ಎಂದು ಡಿಕೆಶಿ ಕಿಡಿ

ಡಿ.ಕೆ. ಶಿವಕುಮಾರ್‌

geetha

bangalore , ಬುಧವಾರ, 7 ಫೆಬ್ರವರಿ 2024 (17:33 IST)
ನವದೆಹಲಿ : ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಯಾವುದೂ ಇಲ್ಲ. ಇದುವರೆಗೂ ಕೇಂದ್ರ ಸರ್ಕಾರದಿಂದ ಯಾವುದೆ ನೆರವು, ಅನುದಾನ ತರದೇ ಇಂದು ಇಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ ಡಿಕೆಶಿ, ಇಲ್ಲಿ ಇಂದು ಸೇರಿರುವುದು ಕೇವಲ
Photo Courtesy: Twitter
ನಮ್ಮ ಶಾಸಕರು ಮತ್ತು ವಿಧಾನ ಪರಿಷತ್‌  ಸದಸ್ಯರು ಮಾತ್ರವಲ್ಲ. ಇಡೀ ಕರ್ನಾಟಕ ರಾಜ್ಯದ ಪರವಾಗಿ ನಾವಿಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. ಬುಧವಾರ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಿರುವ ತೆರಿಗೆ ಹಣ ನೀಡುವಂತೆ ಒತ್ತಾಯಿಸಿ ನನ್ನ ತೆರಿಗೆ ನನ್ನ ಹಕ್ಕು ಎಂಬ ಶೀರ್ಷೆಕೆಯಡಿ ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿಸಿದರು. 

ರಾಜ್ಯವನ್ನು ಪ್ರತಿನಿಧಿಸುತ್ತಿರುವ 26 ಮಂದಿ ಸಂಸದರು ಇದುವರೆಗೂ ಕರ್ನಾಟಕಕ್ಕೆ ಏನು ಉಪಕಾರ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದಾರೆ. ಇದುವರೆಗೂ ಕರ್ನಾಟಕಕ್ಕೆ ಇಷ್ಟು ಅನ್ಯಾಯ ಮಾಡುತ್ತಾರೆಂದು ನಾವೆಂದೂ ಭಾವಿಸಿರಲಿಲ್ಲ. ಇದರ ವಿರುದ್ದ ನಾವು ಹೋರಾಟಕ್ಕೆ ಸಿದ್ದವಾಗಿದ್ದೇವೆ ಎಂದು ಡಿಕೆಶಿ ಹೇಳಿದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಕೊಡಿಸುವುದಾಗಿ ಯುವತಿಯೋರ್ವಳ ಮೇಲೆ ನಿರಂತರ ಅತ್ಯಾಚಾರ