Select Your Language

Notifications

webdunia
webdunia
webdunia
webdunia

ಕೆಲಸ ಕೊಡಿಸುವುದಾಗಿ ಯುವತಿಯೋರ್ವಳ ಮೇಲೆ ನಿರಂತರ ಅತ್ಯಾಚಾರ

ಅತ್ಯಾಚಾರ

geetha

ನವದೆಹಲಿ , ಬುಧವಾರ, 7 ಫೆಬ್ರವರಿ 2024 (17:00 IST)
ನವದೆಹಲಿ :ಕೆಲಸ ಕೊಡಿಸುವುದಾಗಿ ಕರೆ ತಂದು ಯುವತಿಯೋರ್ವಳ ಮೇಲೆ ವ್ಯಕ್ತಿಯೊಬ್ಬ ನಿರಂತರ ಅತ್ಯಾಚಾರವೆಸಗಿದ್ದೂ ಅಲ್ಲದೇ ಆಕೆಯ ಮೇಲೆ ಬಿಸಿನೀರು ಸುರಿದು ವಿಕೃತಿ ಮೆರೆದಿರುವ ಘಟನೆ ದೇಶದ ರಾಜಧಾನಿಯಲ್ಲಿ ನಡೆದಿದೆ. ಡಾರ್ಜಲಿಂಗ್‌ ಮೂಲದ ಯುವತಿ ನೀಡಿದ ದೂರಿನ ಮೇಲೆ ಆರೋಪಿ ಪರಾಸ್‌ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಯುವತಿ ಪಶ್ಚಿಮ ಬಂಗಾಳದ ಡಾರ್ಜೆಲಿಂಗ್‌ ನಲ್ಲಿ ವಾಸವಾಗಿದ್ದಳು.

ದೆಹಲಿಯಲ್ಲಿ ನೆಲೆಸಿದ್ದ ಆರೋಪಿ ಪರಾಸ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಮನೆಗೆ ಕರೆತಂದಿದ್ದ. ಬಳಿಕ ಆಕೆಯ ಮೇಲೆ ಸತತವಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಅತ್ಯಾಚಾರ ನಡೆಸಿದ್ದ.ಇಷ್ಟೇ ಅಲ್ಲದೆ ಆಕೆಯನ್ನು ಹೊಡೆದು ಹಿಂಸಿಸಿ ಮೈಮೇಲೆ ಕುದಿಯುವ ನೀರು ಸುರಿದಿದ್ದ. ಯುವತಿ ಪೊಲೀಸ್‌ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಳು. ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿ, ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಕಾಂಗ್ರೆಸ್ ತೆರಿಗೆ ಹೋರಾಟದ ಬಗ್ಗೆ ಪ್ರಧಾನಿ ಮೋದಿ ಟಾಂಗ್