Publish Date: Sun, 24 Oct 2021 (09:28 IST)
Updated Date: Sun, 24 Oct 2021 (09:28 IST)
ಚಿಕ್ಕೋಡಿ: ನಾಲ್ವರು ಮಕ್ಕಳಿಗೆ ವಿಷವುಣಿಸಿ ತಂದೆ ತಾನೂ ಸಾವಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.
ತಂದೆ ಗೋಪಾಲ ಹಾದಿಮನಿ ತನ್ನ ಮಕ್ಕಳಾದ ಸೌಮ್ಯಾ (19), ಶ್ವೇತಾ (16), ಸಾಕ್ಷಿ (11) ಮತ್ತು ಸೃಜನ (8)ಗೆ ವಿಷವುಣಿಸಿ ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆಲವು ದಿನಗಳ ಹಿಂದೆ ಗೋಪಾಲ ಹಾದಿಮನಿ ಪತ್ನಿ ಬ್ಲ್ಯಾಕ್ ಫಂಗಸ್ ಖಾಯಿಲೆಯಿಂದ ಮೃತಪಟ್ಟಿದ್ದರು. ಇದರಿಂದ ಮನನೊಂದು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.