Select Your Language

Notifications

webdunia
webdunia
webdunia
webdunia

ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಕೊಲೆ

ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಕೊಲೆ
bangalore , ಶನಿವಾರ, 23 ಅಕ್ಟೋಬರ್ 2021 (20:57 IST)
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಶುಕ್ರವಾರ ತಡ ರಾತ್ರಿ ಯುವಕನ ಬರ್ಬರ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.
 
ಪ್ರಕರಣದ ಕುರಿತು ಡಿ.ಸಿ, ಪಿ ಸಂಜೀವ್ ಪಾಟೀಲ್ ಮಾತನಾಡಿ ಚಂದ್ರಶೇಖರ್ (30) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ಘಟನೆ ನೆಡೆದಿದೆ. ಆರೋಪಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆಗೈದಿದ್ದಾರೆ. 
 
ಕೊಲೆಗೈದು ಆರೋಪಿಗಳು ತಲೆ ಮರಿಸಿಕೊಂಡಿದ್ದಾರೆ, ಹಣಕಾಸಿನ ವಿಚಾರವಾಗಿ ಸ್ನೇತರಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಬ್ಯಾಟರಾನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
 
ಕೊಲೆ ಆರೋಪಿಗಳಿಗಾಗಿ ಸಿಬ್ಬಂದಿಯಿಂದ ಹುಟಕಾಟ ನೆಡೆದಿದೆ. ಕೊಲೆಯಾವದವನು ಶಿವಮೊಗ್ಗ ಮೊಲದವನಾಗಿದ್ದು, ಆರ್.ಆರ್.ನಗರದಲ್ಲಿ ವಾಸವಿದ್ದ. ಆಟೋ ರಿಕ್ಷಾ ಚಾಲನೆ ಮಾಡಿಕೊಂಡು ಹೂ ವ್ಯಾಪರ ಮಾಡುತ್ತಿದ್ದ ಎಂದಿದ್ದಾರೆ. 
 
ಅವಲಹಳ್ಳಿ ಮುಖ್ಯ ರಸ್ತೆಯ ಜೈನ್ ಆಸ್ಪತ್ರೆ ಹಿಂಭಾಗದಲ್ಲಿ ಘಟನೆ ನೆಡೆದಿದೆ. ಹಣಕಾಸಿನ ವಿಚಾರಕ್ಕೆ ಚಂದ್ರು ಹಾಗೂ ಸ್ನೇಹಿತರ ನಡುವೆ ಗಲಾಟೆ ನೆಡೆದಿದೆ. ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದು, ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಕಳೆದ ರಾತ್ರಿ 9.30 ಸುಮಾರಿಗೆ ನಡೆದಿರುವ ಘಟನೆ ನೆಡೆಯುವ ಮೊದಲು ಮಹಾವೀರ್ ಜೈನ್ ಆಸ್ಪತ್ರೆ ಹಿಂಬಾಗ ಕಾರ್ ನಲ್ಲಿ ಪಾರ್ಟಿ ಮಾಡಲಾಗಿತ್ತು. ಕಂಟ ಪೂರ್ತಿ ಕುಡಿದ ಮೇಲೆ ಗಲಾಟೆ ಮಾಡಿ ಕೊಲೆ ಮಾಡಲಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
 
ಘಟನೆ ಸ್ಥಳದಲ್ಲಿದ್ದ ಕಾರು ಬಿಟ್ಟು ನಿರ್ವಾಹಕರು ಎಸ್ಕೇಪ್ ಆಗಿದ್ದು, ಕಾರಿನಲ್ಲಿ ವಿವಿಧ ಬಗೆಯ ಮಧ್ಯದ ಬಾಟಲ್, ಸ್ನಾಕ್ಸ್ ಗಳು ಪತ್ತೆಯಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯುತ್ತಾ?