Select Your Language

Notifications

webdunia
webdunia
webdunia
webdunia

ಯುವತಿಯ ವಿಚಾರಕ್ಕೆ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

ಯುವತಿಯ ವಿಚಾರಕ್ಕೆ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ
bangalore , ಶನಿವಾರ, 9 ಅಕ್ಟೋಬರ್ 2021 (20:48 IST)
ಬೆಂಗಳೂರು: ಯುವತಿಯ ವಿಚಾರಕ್ಕೆ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂವರು ಆರೋಪಿಗಳಾದ ನಯೀಮ್​​, ಮೋಹಿನ್, ವಸೀಮ್ ಎಂಬಾತನನ್ನು ಘಟನೆ ನಡೆದ 8 ಗಂಟೆಯೊಳಗೆ ಹೆಚ್​​​ಎಎಲ್​ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಲಿಖಿತ್​​ ಮತ್ತು ಅರೋಪಿಗಳು ಎಲ್ಲರೂ ಒಂದೇ ಏರಿಯಾದವರು. ಯುವಕರ ಗುಂಪುಗಳ ನಡುವೆ ಹಣ ಮತ್ತು ಯುವತಿಯ ವಿಚಾರವಾಗಿ ಗಲಾಟೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಲಿಖಿತ್ ಈ ಮೊದಲು ಸಿದ್ದಿಕ್ ಎಂಬಾತನ ಬಳಿ ಸಾಲ ಪಡೆದಿದ್ದ. ಹಣ ವಾಪಸ್​ ಕೇಳಿದಾಗ ಕೊಡದೆ ಅವಾಚ್ಯ ಪದಗಳಿಂದ ನಿಂದಿಸಿದ್ದ. ಅಲ್ಲದೆ ಈ ಕುರಿತು ಮಾತನಾಡಲು ಆರೋಪಿಗಳಿಗೆ ಲಿಖಿತ್​ ಕರೆ ಮಾಡಿದ್ದ. ಇದಕ್ಕೆ ಆರೋಪಿಗಳು ಕೂಡ ಒಪ್ಪಿದ್ದರು. ಮಾತುಕತೆಗೆ ಬರುವಾಗ ಲಿಖಿತ್​​ ಜತೆ ನವೀನ್ ಮತ್ತು ಕದಿರೇಶ್ ಎಂಬುವರು ಬಂದಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಲಿಖಿತ್​​ನನ್ನು ಡ್ರ್ಯಾಗರ್​​ನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ: ನಯೀಮ್​​ ಮತ್ತು ಲಿಖಿತ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಯುವತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಶುಕ್ರವಾರ ಸಂಜೆ 4 ಗಂಟೆಗೆ ಈ ವಿಚಾರದ ಕುರಿತು ಮಾತನಾಡಲು ನಯೀಮ್​ ನನ್ನು ಹೆಚ್‌ಎಎಲ್​​ನ ಲಾಲ್ ಬಹದ್ದೂರ್ ಶಾಸ್ತ್ರಿ ನಗರಕ್ಕೆ ಬರಲು ಲಿಖಿತ್ ಹೇಳಿದ್ದ. ಈ ವೇಳೆ ಯುವತಿ ವಿಚಾರವಾಗಿ ಇಬ್ಬರೂ ಮಾತುಕತೆ ಪ್ರಾರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು. ಬಳಿಕ ಡ್ರ್ಯಾಗರ್​ನಿಂದ ಲಿಖಿತ್​​​ಗೆ ಇರಿದು ಇಬ್ಬರು ಪರಾರಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವಾರದಲ್ಲಿ ನಗರದ ಹಲಸೂರು ಠಾಣಾ ಸರಹದ್ದಿನಲ್ಲಿ ನಾಲ್ಕು ಬೈಕ್ ಕಳುವಾಗಿರುವ ಬಗ್ಗೆ ವರದಿ