Select Your Language

Notifications

webdunia
webdunia
webdunia
Sunday, 13 April 2025
webdunia

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜಧಾನಿಗೆ ಯೆಲ್ಲೋ ಅಲರ್ಟ್

Airbag crash in Bengaluru: Yellow alert to capital
bangalore , ಶನಿವಾರ, 9 ಅಕ್ಟೋಬರ್ 2021 (20:34 IST)
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಗರದಲ್ಲಿ ನಿನ್ನೆ ಇಂದು ಮಳೆಯಾಗುತ್ತಿದೆ. ಬೆಳಗಿನಿಂದ ಮೋಡ ಕವಿದ ವಾತಾವರಣವಿದೆ. ನಿನ್ನೆಯಿಂದ  ಅಗಾಗ್ಗೆ ಮಳೆ ಸುರಿದಿದೆ. ಇಂದು ವ್ಯಾಪಕ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಣೆ ಮಾಡಿದೆ.
 
ಆರ್.ಆರ್.ನಗರ, ಪುಲಿಕೇಶಿನಗರ, ಕೋರ ಮಂಗಲ, ತಾವರಕೆರೆ, ಕೆ.ಆರ್ ಮಾರುಕಟ್ಟೆ, ಮೆಜೆಸ್ಟಿಕ್, ಶಿವನಂದ ವೃತ್ತ, ಗಾಂಧಿನಗರ, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಯಶವಂತಪುರ, ಜೆ.ಪಿ. ನಗರ  ಮತ್ತು ಮತ್ತಿಕೆರೆ ಸೇರಿದಂತೆ ಇನ್ನಿತರ ಬಡಾವಣೆಗಳಲ್ಲಿ ನಿನ್ನೆ ತಡ ರಾತ್ರಿಯಿಂದ ಮಳೆಯಾಗಿದೆ. 
 
ತಗ್ಗು ಪ್ರದೇಶಗಳ ಬಡಾವಣೆಗಳಲ್ಲಿ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ಹಾಗೂ ಅಂಡರ್‌ಪಾಸ್ ಗಳ ಕೆಳಗೆ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿನಾಯಿಗಳು ಬಾಲಕಿ ಮೇಲೆ ದಾಳಿ