Select Your Language

Notifications

webdunia
webdunia
webdunia
webdunia

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ
ಹೊಸದಿಲ್ಲಿ , ಭಾನುವಾರ, 24 ಅಕ್ಟೋಬರ್ 2021 (09:19 IST)
ಹೊಸದಿಲ್ಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ದನಿಯೆತ್ತಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಸಮ್ಮುಖದಲ್ಲೇ ಈ ವಿಚಾರವನ್ನು ಅವರು ಪ್ರಸ್ತಾವಿಸಿದ್ದಾರೆ.
ಸೌಕರ್ಯಗಳನ್ನು ಕಲ್ಪಿಸುವ ವಿಚಾರ ಯಾವತ್ತಿಗೂ ನಿರ್ಲಕ್ಷಿತ ವಿಚಾರವಾಗಿಯೇ ಉಳಿದಿದೆ. ಇಂಥ ಮನಃಸ್ಥಿತಿಗಳಿಂದಾಗಿ, ದೇಶದ ನ್ಯಾಯಾಲಯಗಳು ಶಿಥಿಲಗೊಂಡಿರುವ ವ್ಯವಸ್ಥೆಗಳಡಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ, ನ್ಯಾಯಾಲಯಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಕಷ್ಟವಾಗುತ್ತಿದೆ’ ಎಂದು ನ್ಯಾ| ರಮಣ ವಿಷಾದಿಸಿದ್ದಾರೆ. “ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಗತ್ಯ ಮೂಲ
ಷರಿಗೆ ಶೌಚಾಲಯವಿಲ್ಲ ಎಂದು ತಿಳಿಸಿದ ಅವರು, ಶೇ. 50ರಷ್ಟು ನ್ಯಾಯಾಲಯಗಳಲ್ಲಿ ಗ್ರಂಥಾಲಯಗಳಿಲ್ಲ. ಶೇ. 46ರಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ’ ಎಂದು ಅವರು ವಿವರಿಸಿದ್ದಾರೆ. “ದೇಶದ ಒಟ್ಟಾರೆ ನ್ಯಾಯಾಲಯಗಳ ಪೈಕಿ ಕೇವಲ ಶೇ.5ರಷ್ಟರಲ್ಲಿ ಮಾತ್ರ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿವೆ. ಶೇ. 26ರಷ್ಟು ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವೇ ಇಲ್ಲ. ಶೇ.16ರಷ್ಟು ಕೋರ್ಟ್ಗಳಲ್ಲಿ ಪುರು
ಈ ಅವ್ಯವಸ್ಥೆಗಳನ್ನು ಸರಿಪಡಿಸಲು, ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಪ್ರಾಧಿಕಾರ ರಚಿಸಬೇಕು ಎಂದು ಅವರು ರಿಜಿಜು ಅವರನ್ನು ಆಗ್ರಹಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಪ್ ಮೇಸೆಜ್ ಗಳನ್ನ ಫಾರ್ವರ್ಡ್ ಮಾಡುವವರು ಈ ನ್ಯೂಸ್ ನ ನೋಡಲೇಬೇಕು