Select Your Language

Notifications

webdunia
webdunia
webdunia
webdunia

ವಾಟ್ಸಪ್ ಮೇಸೆಜ್ ಗಳನ್ನ ಫಾರ್ವರ್ಡ್ ಮಾಡುವವರು ಈ ನ್ಯೂಸ್ ನ ನೋಡಲೇಬೇಕು

ವಾಟ್ಸಪ್ ಮೇಸೆಜ್ ಗಳನ್ನ ಫಾರ್ವರ್ಡ್ ಮಾಡುವವರು ಈ ನ್ಯೂಸ್ ನ  ನೋಡಲೇಬೇಕು
bangalore , ಶನಿವಾರ, 23 ಅಕ್ಟೋಬರ್ 2021 (21:05 IST)
ನೀವು ವಾಟ್ಸ್​ಆಯಪ್​​ನಲ್ಲಿ ಯಾವುದೇ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಿದಾಗ, ಅದನ್ನು ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದು.
ಸುಳ್ಳು ಮಾಹಿತಿ, ಫೇಕ್ ನ್ಯೂಸ್  ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಾಟ್ಸ್​ಆಯಪ್  ಒಂದಲ್ಲ ಒಂದು ಹೊಸ ಫೀಚರ್​ಗಳನ್ನು ಪರಿಚಯಿಸುತ್ತಲೇ ಇದೆ.
 
ಈಗಾಗಲೇ ಒಂದು ಸಂದೇಶವು ಹಲವಾರು ಬಾರಿ ಫಾರ್ವರ್ಡ್ (Forword Messages) ಆಗಿದ್ದರೆ ಈ ಕುರಿತು ಅದು ಬಳಕೆದಾರರಿಗೆ ಸೂಚನೆ ನೀಡುವ ಫೀಚರ್ ನೀಡಲಾಗಿದೆ. ವಾಟ್ಸ್​ಆಯಪ್​​ನಲ್ಲಿ ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರು ಕಳುಹಿಸಿದ ಸಂದೇಶವನ್ನು ಬರೆದಿದ್ದಾರೆಯೇ ಅಥವಾ ಬೇರೆಯವರ ಸಂದೇಶವನ್ನು ಕಳುಹಿಸಿದ್ದಾರೆ ಅನ್ನೊದು ಫಾರ್ವರ್ಡ್‌ ಫಿಚರ್‌ ಮೂಲಕ ತಿಳಿಯಬಹುದಾಗಿದೆ. ಪ್ರಾರಂಭದಲ್ಲಿ ವಾಟ್ಸ್​ಆಯಪ್​​ನಲ್ಲಿ ಒಂದೇ ಭಾರಿ ಎಷ್ಟು ಜನರಿಗೆ ಬೇಕಿದ್ದರೂ ಫಾರ್ವರ್ಡ್‌ ಮಾಡಬಹುದಾಗಿತ್ತು. ಆದರೆ ದಿನೇ ದಿನೇ ಹೆಚ್ಚಿದ ವದಂತಿಗಳು, ನಕಲಿ ಸುದ್ದಿಗಳು ಫಾರ್ವರ್ಡ್‌, ವೈರಲ್ ಸಂದೇಶಗಳು ಫಾರ್ವರ್ಡ್‌ ಆಗೋದು ಜಾಸ್ತಿ ಆಗಿದ್ದರಿಂದ ಫಾರ್ವರ್ಡ್‌ ಮಾಡುವ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.
 
ವಾಟ್ಸ್​ಆಯಪ್​​ನಲ್ಲಿ ನೀವು ಒಂದು ಸಮಯದಲ್ಲಿ ಐದು ಚಾಟ್‌ಗಳಿಗೆ ಮಾತ್ರ ಸಂದೇಶವನ್ನು ಫಾರ್ವರ್ಡ್ ಮಾಡಬಹುದಾಗಿದೆ. ನೀವು ಬಹಳಷ್ಟು ಸ್ನೇಹಿತರಿಗೆ ಸಂದೇಶವನ್ನು ಫಾರ್ವರ್ಡ್‌ ಮಾಡಬೇಕೆನಿಸಿದರೆ ಮತ್ತೆ ಮತ್ತೆ ಫಾರ್ವರ್ಡ್‌ ಮಾಡಬೇಕಾಗುತ್ತದೆ. ಸಂದೇಶಗಳು ಮಾತ್ರವಲ್ಲದೆ ಫೋಟೋಗಳು, ವೀಡಿಯೊಗಳು, ಸ್ಥಳ ಮತ್ತು ಸಂಪರ್ಕಗಳನ್ನು ಸುಲಭವಾಗಿ ಫಾರ್ವರ್ಡ್ ಮಾಡಬಹುದು. ಮರು ಅಪ್‌ಲೋಡ್ ಮಾಡುವ ತೊಂದರೆಯಿಲ್ಲದೆ ಇವುಗಳನ್ನು ಎಲ್ಲಾ ಗುಂಪುಗಳಿಗೆ ಒಂದೇ ಬಾರಿಗೆ ಕಳುಹಿಸಬಹುದು.
 
ಇನ್ನು ನೀವು ವಾಟ್ಸ್​ಆಯಪ್​​ನಲ್ಲಿ ಯಾವುದೇ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಿದಾಗ, ಅದನ್ನು ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದು. ವಾಟ್ಸ್​ಆಯಪ್​ ಎರಡು ಬಾಣದ ಐಕಾನ್ ಮತ್ತು “ಹಲವು ಬಾರಿ ಫಾರ್ವರ್ಡ್ ಮಾಡಲಾಗಿದೆ” ಲೇಬಲ್ ಅನ್ನು ಪ್ರದರ್ಶಿಸುತ್ತದೆ. ಇಂತಹ ಸಂದೇಶಗಳನ್ನು ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದಾಗಿರುತ್ತದೆ.
 
ಇದಲ್ಲದೆ ವಾಟ್ಸ್​ಆಯಪ್ ಮೂಲಕ ಕೇವಲ ಟೆಕ್ಸ್ಟ್‌ ಮಾತ್ರವಲ್ಲ, ಮೀಡಿಯಾ ಫೈಲ್‌, ಲೊಕೇಶನ್‌ ಮತ್ತು ಕಂಟ್ಯಾಕ್ಟ್‌ಗಳನ್ನು ಫಾರ್ವರ್ಡ್ ಮಾಡಬಹುದಾಗಿದೆ. ಆದ್ದರಿಂದ ನೀವು ಅವುಗಳನ್ನು ಮತ್ತೆ ಅಪ್‌ಲೋಡ್ ಮಾಡಬೇಕಾದ ಅನಿವಾರ್ಯತೆ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆ