Select Your Language

Notifications

webdunia
webdunia
webdunia
webdunia

ತೆಲುಗು ಸಿನಿಮಾ ಸ್ಟೈಲ್ ನಲ್ಲಿ ರಸ್ತೇಲಿ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ

Fatal attack on Rusteli businessman in Telugu cinema style
bangalore , ಶುಕ್ರವಾರ, 16 ಡಿಸೆಂಬರ್ 2022 (20:41 IST)
ತೆಲುಗು ಸಿನಿಮಾ ಸ್ಟೈಲ್ ನಲ್ಲಿ  ರಸ್ತೇಲಿ  ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.ಕೋಟಿ ಕೋಟಿ ಲೋನ್ ಕೊಡಿಸುತ್ತೇನೆ ಎಂದು ಕಮೀಷನ್ ಪಡೆದು ವಂಚಿಸಿದ್ದಾನೆ, ಅಲ್ದೆ ಕೊಟ್ಟ ಹಣ ಕೇಳಿದ್ದಕೆ ಮಾರಣಾಂತಿಕ ಹಲ್ಲೆ ಮಾಡಿ ಉದ್ಯಮಿಯ ಕಾಲುಗಳನ್ನೇ  ಕ್ರಶ್  ಮಾಡಿದ್ದ ಆರೋಪಿಗಳು ಅರೆಸ್ಟ್ ಬಾಗಲೂರ ‌ಪೋಲಿಸರು ಅರೆಸ್ಟ್ ಮಾಡಿದ್ದಾರೆ.ಕುಮಾರ್, ಮನೋಜ್ ಕುಮಾರ್, ಆದಿತ್ಯ, ಶ್ರೀಕಾಂತ್ ರೆಡ್ಡಿ ಹಾಗೂ ರಂಜಿತ್ ಬಂಧಿತ ಆರೋಪಿಗಳು ಇವರೆಲ್ಲರೂ ಹೈದ್ರಾಬಾದ್ ಮೂಲದ 51 ವರ್ಷದ ರಾಮಣೇಶ್ವರ ರಿಗೆಹಲ್ಲೆ ಮಾಡಿದ್ದಾರೆ. ಹೈದ್ರಾಬಾದ್ ನಲ್ಲಿ ಉದ್ಯಮ ನಡೆಸುತ್ತಿದ್ದ ರಾಮನೇಶ್ವರ್ ಗೆ 10 ಕೋಟಿ ಲೋನ್ ಅಗತ್ಯ ಇರುತ್ತೆ, ಆಗ್ಲೇ ಪ್ರಕರಣದ ಪ್ರಮುಖ ಆರೋಪಿ  ಕುಮಾರ್ ಪರಿಚಯ ಆಗಿದೆ ಉದ್ಯಮಿಗೆ ,ಲೋನ್ ಕೊಡಿಸೋ ಏಜನ್ಸಿ ನಡೆಸೋದಾಗಿ ಹೇಳಿಕೊಂಡು ಆರೋಪಿ ಕುಮಾರ್ 10 ಕೋಟಿ ಲೋನ್ ಗೆ 1 ಕೋಟಿ ಕಮೀಷನ್  ತೆಗೆದು ಕೊಳ್ತಾನೆ .ಆದ್ರೇ ತಿಂಗಳುಗಳು ಕಳೆದ್ರೂ ಲೋನ್ ಮಾತ್ರ ಸಿಕ್ಕಿರಲ್ಲ  ಆಗ ಉದ್ಯಮಿ ಕೊಟ್ಟಿದ್ದ ಒಂದು  ಕೋಟಿ ವಾಪಾಸ್ ಕೇಳ್ತಾರೆ .ಆಗ ಕುಮಾರ್ ಹಣ ಪಡೆದ ಏಜನ್ಸಿ ಮಾಲೀಕ ಮನೋಜ್ ಕುಮಾರ್ ಬೆಂಗಳೂರಿನಲ್ಲಿದ್ದು, ಆತನಿಂದ ಹಣ ಕೊಡಿಸೋದಾಗಿ ಹೊಸ ನಾಟಕ ಶುರು ಮಾಡಿ,ಮನೋಜ್ ಕುಮಾರ್ ನನ್ನ ಭೇಟಿ ಮಾಡಲು ಬೆಂಗಳೂರಿಗೆ ಬರುವಂತೆ  ರಾಮನೇಶ್ವರ್ ಗೆ ಸಾಕಷ್ಟು ಸಲ ನಿರಾಸೆ ಯಾಗುತ್ತೆ. ಕಡೆಗೆ ಪೊಲೀಸ್ ಠಾಣೆಗೆ ದೂರು ಕೋಡುವ ನಿರ್ಧಾರಕ್ಕೆ ಬರ್ತಾರೆ.  ಹೀಗಾಗಿಯೇ ಕಡೆಗೆ ಕಳೆದ ಸೆಪ್ಟೆಂಬರ್ ನಲ್ಲಿ ರಾಮನೇಶ್ವರ್ ರನ್ನ ಬೆಂಗಳೂರಿಗೆ ಕರೆದಿಕೊಳ್ಳುವ ಕುಮಾರ್ ಹಾಗೂ ಮನೋಜ್ ಹಣ ಕೊಡೋದಾಗಿ ನಂಬಿಸ್ತಾರೆ  ಏರ್ ಪೋರ್ಟ್ಕ್ಗೆ ಹೋಗುವ ಮುನ್ನ ಬಾಗಲೂರು ಬಳಿ ಹಣಕ್ಕಾಗಿ ಓಲಾ ಕ್ಯಾಬ್ನಲ್ಲಿ ಬರುವ ರಾಮನೇಶ್ವರ್ ಗೆ ಸ್ಕೂಟಿ ಯಲ್ಲಿ ಬರುವ ಆದಿತ್ಯ, ರಂಜಿತ್ ಹಾಗೂ ಶ್ರೀಕಾಂತ್ ರೆಡ್ಡಿ ನಡು ರಸ್ತೇಲಿ ಮಲಗಿಸಿ ಕಾಲುಗಳ ಮೂಳೆಗಳು ಪುಡಿ ಪುಡಿ ಮಾಡ್ತಾರೆ 
ಅಲ್ಲದೆ ಕೈ ಹಾಗೂ ದೇಹದ ಇತರೆ ಭಾಗಗಳಿಗೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗುತ್ತಾರೆ ಓಲಾ ಕ್ಯಾಬ್ ಡ್ರೈವರ್ ಗಾಯಾಳುವನ್ನ ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದ ಡ್ರೈವರ್. ಈ ಘಟನೆ ನಡೆದ ನಂತ್ರ ಹುಡುಕಾಟ ನಡೆಸಿದ್ದ ಬಾಗಲೂರು  ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ
 

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಹೇಳಿಕೆ ಸಮರ್ಥನೆ ಮಾಡಿಕೊಂಡ ಪ್ರಿಯಾಂಕ ಖರ್ಗೆ