Select Your Language

Notifications

webdunia
webdunia
webdunia
webdunia

ಫ್ರೀ ಫಾರ್ ಆಲ್ ಅನ್ನೋತರಹ ಆಗಿದೆ ಬಿಜೆಪಿ ಪಕ್ಷ- ಪ್ರಿಯಾಂಕ ಖರ್ಗೆ

Free for all is like BJP party
bangalore , ಶುಕ್ರವಾರ, 16 ಡಿಸೆಂಬರ್ 2022 (17:40 IST)
ಗೃಹ ಸಚಿವರು ಅಸಮರ್ಥರು ಅಂತ ಅವರ ಶಾಸಕರೇ ಹೇಳಿದ್ದಾರೆ.ಬೆಂಗಳೂರಿನ ಕೆಜಿ ಡೆಜಿ ಹಳ್ಳಿ ಬೆಂಕಿ ಹೆಚ್ಚಿದ್ದು ಕೂಡ ಕಾಂಗ್ರೆಸ್ ಫೆಲ್ಯೂರಾ?ನಮ್ಮ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗಲೂ ಕೂಡ ಕಾಂಗ್ರೆಸ್ ಮೇಲೆ ಗೂಬೆ ಕೂರಿಸ್ತಿರಾ?ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅನ್ನೋದಾದರೆ ಯಾಕೆ ಇಂಟೆಲಿಜೆನ್ಸ್ ತಪ್ಪಿನ ಬಗ್ಗೆ ಮಾತಾಡ್ತಿಲ್ಲ ಎಂದು ಪ್ರಿಯಾಂಕ ಖರ್ಗೆ ಬಿಜೆಪಿ‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಇವರ ಶಾಸಕರೇ ಶಾಸಕರ ಭವನದಲ್ಲಿ ಲಂಚ ತಗೊಳ್ತಾರೆ ಅಂತ ಹೇಳ್ತಾರೆ.ನಾವೂ ಜಾತಿ ಧರ್ಮದ ಆಧಾರದ ಮೇಲೆ ಭಾವನೆಗಳ ಆಧಾರದ ಮೇಲೆ ಚುನಾವಣೆಗೆ ಹೋಗಲ್ಲ.ಬಿ ಎಸ್ ವೈ ಮುಕ್ತ ಬಿಜೆಪಿ ಮಾಡುವುದಕ್ಕೆ ಇವರು ಹೊರಟಿದ್ದಾರೆ.ಯಡಿಯೂರಪ್ಪಗೆ ಈಗಾಗಲೇ ಬಿಜೆಪಿಯವರು ಬಿಟ್ಟುಬಿಟ್ಟಿದ್ದಾರೆ.ಯಾವ ಕಾರ್ಯಕ್ರಮಕ್ಕೂ ಕೂಡ ಯಡಿಯೂರಪ್ಪಗೆ ಆಹ್ವಾನ ಕೊಡ್ತಿಲ್ಲ.ಜೆಪಿ ನಡ್ಡಾ ಕಾರ್ಯಕ್ರಮಕ್ಕೆ ಅನಿವಾರ್ಯವಾಗಿ ಯಡಿಯೂರಪ್ಪ ಗೆ ಕರೆದಿದ್ದಾರೆ.ನಳೀನ್ ಕುಮಾರ್ ಕಟೀಲ್ ಗೆ ಪಕ್ಷದ ಮೇಲೆ ಹಿಡಿತವೇ ಇಲ್ಲ.ಫ್ರೀ ಫಾರ್ ಆಲ್ ಅನ್ನೋ ತರಹ ಆಗಿದೆ ಬಿಜೆಪಿ ಪಕ್ಷ ಎಂದು ಪ್ರೀಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವರ ಜೊತೆ ಪೊಲೀಸರ ಮೀಟಿಂಗ್ ಬೆನ್ನಲ್ಲೇ ಮತ್ತೊಂದು ಮಹತ್ವದ ಸಭೆ