ಬೆಂಗಳೂರು: ಇಂದಿನಿಂದ ಫಾಸ್ಟ್ ಟ್ಯಾಗ್ ನಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ಹೆದ್ದಾರಿಗಳಲ್ಲಿ ಪ್ರಯಾಣಿಸುವ ಮೊದಲು ಈ ಹೊಸ ನಿಯಮಗಳ ಬಗ್ಗೆ ಗಮನದಲ್ಲಿರಲಿ.
ಇನ್ನು ಹೆದ್ದಾರಿಯಲ್ಲಿ ಪ್ರಯಾಣಿಸುವ ಮೊದಲು ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿ ಎಲ್ಲವೂ ಸರಿಯಾಗಿದೆಯೇ ಎಂದು ಸರಿಯಾಗಿ ಪರೀಕ್ಷಿಸಿಕೊಂಡು ಹೊರಡಿ. ಯಾಕೆಂದರೆ ಇಂದಿನಿಂದ ಕಡಿಮೆ ಬ್ಯಾಲೆನ್ಸ್, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅಥವಾ ಕಪ್ಪುಪಟ್ಟಿಗೆ ಸೇರ್ಪಡೆಯಾದ ಫಾಸ್ಟ್ ಟ್ಯಾಗ್ ಗಳಿಗೆ ದಂಡ ವಿಧಿಸುವ ಹೊಸ ನಿಯಮ ಜಾರಿಗೆ ಬರಲಿದೆ.
ರಾಷ್ಟ್ರೀಯ ಟೋಲ್ ಪಾವತಿ ನಿಗಮ ಎನ್ ಪಿಸಿಐ ಹೊಸ ನಿಯಮ ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸಲು ವಿಫಲರಾದರೆ ದೊಡ್ಡ ಮೊತ್ತದ ದಂಡ ಕಟ್ಟಬೇಕಾಗುತ್ತದೆ.
ಈ ಮೂರು ನಿಯಮ ಗಮನಿಸಿ:
ವಾಹನ ಟೋಲ್ ದಾಟುವ 60 ನಿಮಿಷ ಮೊದಲು ಮತ್ತು ಟೋಲ್ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್ ಟ್ಯಾಗ್ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು.
ಕಡಿಮೆ ಬ್ಯಾಲೆನ್ಸ್ ಅಥವಾ ತಾಂತ್ರಿಕ ಸಮಸ್ಯೆಗಳಿಂದ ಕಪ್ಪುಪಟ್ಟಿಗೆ ಸೇರಿಸಿದ್ದರೆ ರಿಚಾರ್ಜ್ ಮಾಡಲು 70 ನಿಮಿಷ ಕಾಲಾವಧಿ ನೀಡಲಾಗುತ್ತದೆ.
ಟೋಲ್ ನಲ್ಲೇ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಗಳೇ ಹೊಣೆಯಾಗುತ್ತಾರೆ.
ಈ ಮೇಲೆ ಹೇಳಿದ ನಿಯಮ ಮೀರಿ ಸಕ್ರಿಯವಾಗದೇ ಇದ್ದರೆ ಟೋಲ್ ಸಿಸ್ಟಮ್ ನಲ್ಲಿ ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಹೀಗಾದಲ್ಲಿ ಕಪ್ಪು ಪಟ್ಟಿಗೆ ಸೇರ್ಪಡೆಯಾಗುತ್ತದೆ. ಕಪ್ಪು ಪಟ್ಟಿಗೆ ಸೇರಿಸಿದ ಫಾಸ್ಟ್ ಟ್ಯಾಗ್ ನೊಂದಿಗೆ ಟೋಲ್ ಪ್ರವೇಶಿಸಿದರೆ ವಾಹನ ಚಾಲಕರಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ.