Select Your Language

Notifications

webdunia
webdunia
webdunia
webdunia

ಫ್ರೀ ಕೆಲಸ ಮಾಡಕ್ಕೂ ರೆಡಿ, ಕೆಲಸ ಕೊಡಿ ಸಾರ್ ಎಂದು ಮೊರೆಯಿಟ್ಟ ಬೆಂಗಳೂರಿನ ಟೆಕಿ

Job

Krishnaveni K

ಬೆಂಗಳೂರು , ಸೋಮವಾರ, 17 ಫೆಬ್ರವರಿ 2025 (09:49 IST)
ಬೆಂಗಳೂರು: ಫ್ರೀ ಕೆಲಸ ಮಾಡಕ್ಕೂ ರೆಡಿ ಒಟ್ನಿಲ್ಲಿ ಕೆಲಸ ಕೊಡಿ ಸಾರ್ ಎಂದು ಬೆಂಗಳೂರಿನ ಟೆಕಿಯೊಬ್ಬರು ಅಂಗಲಾಚಿದ್ದಾರೆ. ರೆಡಿಟ್ ನಲ್ಲಿ ತನ್ನ ಬಯೋಡೇಟಾದಲ್ಲಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾರೆ.

ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ರೆಡಿಟ್ ನಲ್ಲಿ ಉದ್ಯೋಗಕ್ಕಾಗಿ ಪೋಸ್ಟ್ ಮಾಡಿದ್ದಾನೆ. ಇದರಲ್ಲಿ ತಾನು 2023 ರಲ್ಲಿ ಪದವಿ ಮುಗಿಸಿದ್ದೇನೆ. ಆದರೆ ಇದುವರೆಗೆ ಸ್ಥಿರ ಉದ್ಯೋಗವೊಂದೂ ಸಿಕ್ಕಿಲ್ಲ. ಫ್ರೀ ಆಗಿ ಕೆಲಸ ಮಾಡಲೂ ರೆಡಿ. ನನಗೆ ಒಂದು ಕೆಲಸ ಕೊಡಿ. ಹಾಗಾದರೂ ಸ್ವಲ್ಪ ಅನುಭವ ಪಡೆದುಕೊಳ್ಳುತ್ತೇನೆ ಎಂದು ಅಳಲು ತೋಡಿಕೊಂಡಿದ್ದೇನೆ.

ಯಾವುದೇ ಕಂಪನಿಗೆ ಹೋದರೂ ಅನುಭವ ಕೇಳುತ್ತಾರೆ. ಆದರೆ ಉದ್ಯೋಗವೇ ಸಿಗದೇ ಅನುಭವ ಹೇಗೆ? ಹೀಗಾಗಿ ಸಂಬಳವೇ ಕೊಡದೇ ಇದ್ದರೂ ಪರವಾಗಿಲ್ಲ ಉದ್ಯೋಗ ಕೊಡಿ ಎಂದು ಮನವಿ ಮಾಡಿದ್ದಾನೆ.

ಆತನ ಈ ಪೋಸ್ಟ್ ನಿರುದ್ಯೋಗ ಸಮಸ್ಯೆಗೆ ಉದಾಹರಣೆಯಾಗಿದೆ. ನನ್ನ ರೆಸ್ಯೂಮ್ ಸುಟ್ಟು ಹಾಕಿದ್ರೂ ಪರವಾಗಿಲ್ಲ, ಸಹಾಯ ಮಾಡಿ ಎಂದು ಆತ ಅಂಗಲಾಚಿದ್ದಾನೆ. ಈಗಾಗಲೇ ಎರಡು ಕಡೆ ಇಂಟರ್ನ್ ಶಿಪ್ ಮುಗಿಸಿರುವ ಈತ ಖಾಯಂ ಉದ್ಯೋಗಕ್ಕಾಗಿ ಬೇಡಿಕೊಳ್ಳುತ್ತಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಹವಾಮಾನ: ಈ ವಾರದಲ್ಲಿ ಮಳೆ ಇದೆಯೇ, ಲೇಟೆಸ್ಟ್ ವರದಿ ಇಲ್ಲಿದೆ