Publish Date: Thu, 18 Feb 2021 (11:34 IST)
Updated Date: Thu, 18 Feb 2021 (11:37 IST)
ಬೆಂಗಳೂರು : ರೈತರಿಗೆ ಹೆಣ್ಣು ಕೊಡುವಂತೆ ಒಂದು ಕಾಯ್ದೆ ತನ್ನಿ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಗೆ ಫೋನ್ ಮಾಡಿ ರೈತನೊಬ್ಬ ಮನವಿ ಮಾಡಿದ್ದಾನೆ.
ರೈತರನ್ನು ಮದುವೆಯಾಗಲು ಯಾರು ಮುಂದೆ ಬರ್ತಿಲ್ಲ. ಕೆಲಸದಲ್ಲಿರುವವರಿಗೆ ಮಾತ್ರ ಹೆಣ್ಣು ಕೊಡ್ತಾರೆ, ಸಿಎಂ ಬಳಿ ಮಾತನಾಡಿ ಒಂದು ಕಾಯ್ದೆ ಜಾರಿಗೆ ತನ್ನಿ . ರೈತನ ಮದುವೆಯಾದ್ರೆ ವಿಶೇಷ ಸವಲತ್ತು ಸಿಗೋ ಯೋಜನೆ ತನ್ನಿ. ಆಗಲಾದ್ರೂ ರೈತರಿಗೆ ಹೆಣ್ಣು ಕೊಡಲು ಮುಂದೆ ಬರ್ತಾರೆ ಎಂದು ಮಳವಳ್ಳಿ ಮೂಲದ ರೈತ ಪ್ರವೀಣ್ ಪೋನ್ ಮೂಲಕ ಸಚಿವರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.