Select Your Language

Notifications

webdunia
webdunia
webdunia
webdunia

ಸ್ಯಾಂಡಲ್ವುಡ್ ಖ್ಯಾತ ನಟಿಯ ಸ್ನೇಹಿತ ಬಂಧನ

ಸ್ಯಾಂಡಲ್ವುಡ್ ಖ್ಯಾತ ನಟಿಯ ಸ್ನೇಹಿತ ಬಂಧನ
ಬೆಂಗಳೂರು , ಭಾನುವಾರ, 17 ಜುಲೈ 2022 (16:35 IST)
ಸ್ಯಾಂಡಲ್‌ವುಡ್ ಖ್ಯಾತ ನಟಿಯ ಸ್ನೇಹಿತ ಹಾಗೂ ಡ್ರಗ್ಸ್ ಕೇಸ್ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ‌. ಯಶವಂತಪುರ ಆರ್‌ಟಿಓನ ಎಸ್‌ಡಿಎ ರವಿಶಂಕರ್ ಬಂಧಿತ ಆರೋಪಿ. ರವಿಶಂಕರ್ ಸ್ಯಾಂಡಲ್‌ವುಡ್ ನಟಿಯೊಬ್ಬರ ಸ್ನೇಹಿತ.
ಕಾರಿಗೆ ಲೈಫ್ ಟೈಮ್ ಟ್ಯಾಕ್ಸ್ ಕಟ್ಟುತ್ತೇನೆ ಎಂದು ಹೇಳಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿದ್ದಾನೆ. ಈ ಹಿನ್ನೆಲೆ ಯೋಗೇಶ್ ಎಂಬುವವರು ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದರು. ಹೀಗಾಗಿ ಪೊಲೀಸರು ರವಿಶಂಕರ್ ಹಾಗೂ ಅಜಯ್ ನನ್ನು ಬಂಧಿಸಿದ್ದಾರೆ. ಅಜಯ್ ಎಂಬ ಕಾರು ಡೀಲರ್ ನಿಂದ ಆಶಾ ಎಂಬವವರು ಕಾರು ಖರೀದಿಸಿದ್ದರು.
 
ಲೈಫ್ ಟೈಮ್ ತೆರಿಗೆ ಕಟ್ಟಲು ಅಜಯ್‌ಗೆ ಆಶಾ-ಯೋಗೇಶ್ ದಂಪತಿ ಹಣ‌ ಕೊಟ್ಟಿದ್ರು. ಆದರೆ ಹಣ ಪಡೆದುಕೊಂಡ ಆರೋಪಿಗಳು ಆರ್‌ಟಿಓಗೆ ಟ್ಯಾಕ್ಸ್ ಕಟ್ಟದೇ ವಂಚಿಸಿದ್ದ. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಪ್ಪಲ್ ಧರಿಸಿ ವಾಹನ ಓಡಿಸುವುದು ಅಪರಾಧ..!!!