Select Your Language

Notifications

webdunia
webdunia
webdunia
webdunia

ಚಪ್ಪಲ್ ಧರಿಸಿ ವಾಹನ ಓಡಿಸುವುದು ಅಪರಾಧ..!!!

ಚಪ್ಪಲ್ ಧರಿಸಿ ವಾಹನ ಓಡಿಸುವುದು ಅಪರಾಧ..!!!
ಬೆಂಗಳೂರು , ಭಾನುವಾರ, 17 ಜುಲೈ 2022 (16:25 IST)

ಮೋಟಾರು ವಾಹನ ಕಾಯ್ದೆಯ ಪ್ರಕಾರ, ಭಾರತದಲ್ಲಿ ವಾಹನ ಚಾಲನೆ ಮಾಡುವಾಗ ಅಥವಾ ಚಲಾಯಿಸುವಾಗ ನೀವು ಕೆಲವು ವಸ್ತುಗಳನ್ನು ಧರಿಸುವುದು ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ, ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಕ್ಲೋಸ್ಡ್ ಶೂಗಳನ್ನು ಧರಿಸುವುದು ಕಡ್ಡಾಯವಾಗಿದೆ. ಯಾರಾದರೂ ಈ ಕಾನೂನು ಉಲ್ಲಂಘಿಸಿದರೆ ಅವರಿಗೆ 1000 ರೂ. ಚಾಲನ್ ಬೀಳಲಿದೆ. ಇದರಂತೆಯೇ ವಾಹನ ಚಾಲನೆ ಮಾಡುವ ವ್ಯಕ್ತಿಯು ಪ್ಯಾಂಟ್‌ನೊಂದಿಗೆ ಶರ್ಟ್ ಅಥವಾ ಟಿ-ಶರ್ಟ್ ಅನ್ನು ಧರಿಸುವುದು ಕಡ್ಡಾಯವಾಗಿದೆ, ಈ ನಿಯಮವನ್ನು ಉಲ್ಲಂಘಿಸುವವರಿಗೆ ರೂ 2000 ದಂಡ ಬೀಳುತ್ತದೆ.

ಎರಡು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು
ಒಬ್ಬ ವ್ಯಕ್ತಿಗೆ ಎರಡು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಂಡುಬಂದರೆ, ಆ ವ್ಯಕ್ತಿಯು ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ಎರಡು ವಾಹನ ಚಲಾವಣೆಯ ಪರವಾನಗಿಗಳನ್ನು ಹೊಂದಿರುವಿರಿ ಎಂದು ಕಂಡುಬಂದರೆ, ಈ ಅಪರಾಧಕ್ಕಾಗಿ ನಿಮಗೆ ಚಾಲನ್ ನೀಡಲಾಗುತ್ತದೆ.

ಫೋನ್ ಬಳಕೆ
ವಾಹನ ಚಲಾಯಿಸುವಾಗ ಮಾತನಾಡುವುದು ಅಥವಾ ಫೋನ್ ನಲ್ಲಿ ಮಾತನಾಡುವುದು ದಂಡನೀಯ ಅಪರಾಧವಾಗಿದೆ. ಆದರೆ ಇದಕ್ಕೆ ಒಂದು ವಿನಾಯಿತಿ ಇದೆ, ಯಾವುದೇ ಸವಾರ/ಚಾಲಕ ತನ್ನ ವಾಹನವನ್ನು ಚಲಾಯಿಸುವಾಗ ತನ್ನ ಫೋನ್ ಅನ್ನು ನ್ಯಾವಿಗೇಷನ್ ಉದ್ದೇಶಕ್ಕಾಗಿ ಮಾತ್ರ ಬಳಸಬಹುದಾಗಿದೆ. ಆದರೆ, ಅದನ್ನು ಬಿಟ್ಟು ಬೇರೆ ಬೇರೆ ಯಾವುದಾದರು ಕೆಲಸಕ್ಕೆ ಬಳಸಿದರೆ ನೀವು ಖಂಡಿತವಾಗಿಯೂ ದಂಡವನ್ನು ಪಾವತಿಸಬೇಕಾಗಬಹುದು. ಈ ಕಾನೂನು ಉಲ್ಲಂಘಿಸುವವರಿಗೆ 5,000 ರೂ.ವರೆಗೆ ದಂಡ ವಿಧಿಸುವ ನಿಯಮವಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಚುನಾವಣೆ ಶಾಸಕರು ಖಾಸಗಿ ಹೋಟೆಲ್ ಗೆ ಶಿಫ್ಟ್