Webdunia - Bharat's app for daily news and videos

Install App

ಕುಟುಂಬ ರಾಜಕಾರಣ ಜನ ತೀರ್ಮಾನ ಮಾಡ್ತಾರೆ ಎಂದ ನಟ

Webdunia
ಭಾನುವಾರ, 17 ಮಾರ್ಚ್ 2019 (19:12 IST)
ನಿಖಿಲ್ ರಾಜಕೀಯಕ್ಕೆ ಇನ್ನು ಸ್ವಲ್ಪ ವಿಳಂಬವಾಗಿ ಎಂಟ್ರಿ ಕೊಡಬೇಕಾಗಿತ್ತು. ನಿಖಿಲ್ ರಾಜಕೀಯಕ್ಕೆ ಬರುವ ವಯಸ್ಸಲ್ಲ ಇದು. ಹೀಗಂತ ಹಿರಿಯ ಚಿತ್ರನಟರೊಬ್ಬರು ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಚಿತ್ರನಟ ಹೇಳಿಕೆ ನೀಡಿದ್ದು, ನಿಖಿಲ್ ಯುವಕರು, ಇನ್ನಷ್ಟು ಅನುಭವದ ಅಗತ್ಯ ಇದೆ. ಈಗಷ್ಟೇ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಇದನ್ನು ನಿಖಿಲ್ ಗೆ ಪ್ರೀತಿಯಿಂದಲೇ ಹೇಳ್ತಿದೀನಿ ನಾನು ಎಂದ್ರು.

ಬೆಂಗಳೂರು ಸೆಂಟ್ರಲ್ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್ ರೈ ಹೇಳಿಕೆ ನೀಡಿದ್ದು, ಮಂಡ್ಯದ ಪ್ರಜೆಗಳು ಭಾರತ ಪ್ರಜೆಗಳಾಗಿ ಯೋಚನೆ ಮಾಡಬೇಕು. ಸುಮಲತಾ ಸರಿಯಾದ ರೀತಿಯಲ್ಲಿ ಮಾತನಾಡ್ತಾ ಇದ್ದಾರೆ. ಅನುಭವಸ್ಥರ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ ಅಂತ ಹೇಳಕ್ಕಾಗಲ್ಲ. ಒಳ್ಳೆಯ ರಾಜಕೀಯ ಬೇಕು ಅಂತ ಹೇಳ್ತಾ ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸ್ಪರ್ಧೆ ನಡೆಸುವ ಹಕ್ಕು ಅವರಿಗಿದೆ. ಸುಮಲತಾ ಅವ್ರು ಅಂಬರೀಶ್ ಜೊತೆ ಇದ್ದವರು, ಮಂಡ್ಯದ ಸೊಸೆ. ನನಗೆ ಹಲವು ವರ್ಷಗಳಿಂದ ಪರಿಚಯ ಇದಾರೆ. ಅವರಿಗೆ ಬೆಂಬಲವಾಗಿ ನಾನು ಇದ್ದೀನಿ ಅಂತ ಹೇಳಿದ್ರು.

ಕುಟುಂಬ ರಾಜಕಾರಣ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕೀಯ ಅಲ್ಲ. ಕುಟುಂಬ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರೆ ಕುಟುಂಬ ರಾಜಕೀಯ ಆಗುತ್ತದೆ. ಅದನ್ನು ಜನರು ನಿರ್ಧಾರ ಮಾಡ್ತಾರೆ ಅಂತ ನಟ ಪ್ರಕಾಶ್ ರಾಜ್ ಹೇಳಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪನನ್ನು ಹೊಗಳಿದ್ದನ್ನು ಬಿಜೆಪಿ ತಿರುಚಿದೆ, ಹಾಗೆ ಹೇಳಿಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಎಸ್ ಸಿ ಎಸ್ ಟಿ ಹಣ ಗ್ಯಾರಂಟಿಗೆ ಬಳಕೆ: ಹಣವಿಲ್ಲದಿದ್ದರೆ ಗ್ಯಾರಂಟಿ ಯಾಕೆ ಎಂದ ಆರ್ ಅಶೋಕ್

ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ

ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ

ಹೆಣ್ಮಕ್ಳು ಸೇಫ್ಟಿಗಾಗಿ ತಪ್ಪದೇ ಈ ಆಪ್ ಡೌನ್ ಲೋಡ್ ಮಾಡಿ

ಮುಂದಿನ ಸುದ್ದಿ
Show comments