Publish Date: Sun, 17 Mar 2019 (14:31 IST)
Updated Date: Sun, 17 Mar 2019 (14:33 IST)
ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತವಾಗಿದ್ದು, ಇದೀಗ ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆ ಕಾಂಗ್ರೆಸ್ ನ ಹಿರಿಯ ಮುಖಂಡ ಜಿ.ಮಾದೇಗೌಡ ಬೆಂಬಲ ಸಿಕ್ಕಿದೆ.
ಹೌದು. ಶನಿವಾರ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಅವರು ಕಾಂಗ್ರೆಸ್ ನ ಹಿರಿಯ ನಾಯಕ ಜಿ. ಮಾದೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಬಳಿಕ ಮಾತನಾಡಿದ ನಿಖಿಲ್, ಮಾದೇಗೌಡ್ರು ಸಾಕಷ್ಟು ಅನುಭವ ಹಂಚಿಕೊಂಡಿದ್ದಾರೆ. ಅವರ ಸಲಹೆಯಂತೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಮಾದೇಗೌಡ, ಜೆಡಿಎಸ್‌ನ ನಿಖಿಲ್ ಮನೆಗೆ ಬಂದು ಆಶೀರ್ವಾದ ಪಡೆದಿದ್ದಾನೆ. ಬೆಂಬಲ ಕೊಡುವಂತೆ ಕೇಳಿಕೊಂಡಿದ್ದಾನೆ. ಮೊದಲು ಇಲ್ಲ ಅಂದರೆ. ನಂತರ ಮೈತ್ರಿ ಅಭ್ಯರ್ಥಿ ಎಂದು ಕೊಡುತ್ತೇನೆ ಹೋಗು ಅಂದೆ, ಆದರೆ ಸುಮಲತಾ ಕೂಡ ಬಂದು ಬೆಂಬಲ ಕೇಳಿದ್ದರು. ಆದರೆ ಆಗಲ್ಲ ಎಂದು ಹೇಳಿಕಳಿಸಿದ್ದೇನೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.