ನಕಲಿ ದಾಖಲೆಗಳ ಮೂಲಕ ಅಸಲಿ ಪಾಸ್ ಫೋರ್ಟ್ ಮಾಡುತ್ತಿದ್ದ ಪ್ರಕರಣ ತನಿಖೆ ವೇಳೆ ಅಸಲಿ ಸತ್ಯ ಹೊರ ಬಿದ್ದಿದೆ. ವಿದೇಶಿಯರು ಹಾಗೂ ಕ್ರಿಮಿನಲ್ ಹಿನ್ನಲೆ ಇರುವವರೆ ಟಾರ್ಗೆಟ್ ಮಾಡ್ತಿದ್ದ ನಕಲಿ ಶೂರರು ಮುಖ್ಯವಾಗಿ ಶ್ರೀಲಂಕಾದವರನ್ನೆ ಟಾರ್ಗೆಟ್ ಮಾಡಿ ಪಾಸ್ ಪೋರ್ಟ್ ಮಾಡಿಕೊಡುತ್ತಿದ್ರು.ಶ್ರೀಲಂಕ ಆರ್ಥಿಕವಾಗಿ ದಿವಾಳಿ ಆದ್ಮೇಲೆ ಬೇರೆ ಯಾವ ದೇಶಗಳಿಗೂ ಎಂಟ್ರಿ ಇಲ್ಲ. ಇದೆ ಕಾರಣಕ್ಕೆ ಇವರನ್ನ ಇಂಡಿಯಾಗೆ ಕರೆಸಿಕೊಂಡು ನಕಲಿ ಪಾಸ್ ಪೋರ್ಟ್ ಮಾಡಿ ಭಾರತೀಯರೆಂದು ವಿದೇಶಗಳಿಗೆ ಕಳುಹಿಸುವ ವ್ಗವಸ್ಥಿತ ಜಾಲ ಇದಾಗಿದೆ.
ಶ್ರೀಲಂಕಾದವರನ್ನೆ ಟಾರ್ಗೆಟ್ ಮಾಡ್ತಿದ್ದ ಬ್ರೋಕರ್ ಅಮೀನ್ ಸೇಠ್ ಅಬುದಾಬಿಯ ಕಿಂಗ್ ಪಿನ್ ಹೇಳಿದವರಿಗೆ ದಾಖಲಾತಿ ಸೃಷ್ಟಿಮಾಡ್ತಿದ್ದ. ಪೊಲೀಸ್ರು ಕೂಡ ನಕಲಿ ದಾಖಲಾತಿ ನೋಡಿ ಅಪ್ರುವಲ್ ಮಾಡ್ತಿದ್ರು.
ಇನ್ನೂ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿದ ಮನೆ ಬಳಿ ಬಂದಾಗ ಪೊಲೀಸ್ರಿಗೆ ಇದೆ ನಮ್ಮ ಮನೆ ಎಂದು ನಂಬಿಸುತ್ತಿದ್ರು. ಇದನ್ನ ನಂಬಿ ಪೊಲೀಸ್ರು ನಂಬಿ ವೆರಿಫಿಕೇಷನ್ ಅಫ್ರೂ ಮಾಡ್ತಿದ್ರು. ಇನ್ನೂ ಈ ನಕಲಿ ದಾಖಲೇ ಸೃಷ್ಟಿಸಲು ಅಮೀನ್ ಸೇಠ್ ಗೆ ಇನ್ನೋರ್ವ ಆರೋಪಿ ಸಾಫ್ಟ್ ವೇರ್ ಇಂಜಿನಿಯರ್ ಸಾಥ್ ನೀಡಿದ್ದ.ಕೊರೋನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡಿದ್ದ ಸಾಫ್ಟ್ ವೇರ್ ಇಂಜಿನಿಯರ್ ಪೋಟೋ ಮತ್ತು ಡ್ಯಾಕ್ಯುಮೆಂಟ್ಸ್ ಎಡಿಟಗ ಮಾಡಿ ಫೇಕ್ ಮಾಡೋ ಕೆಲಸ ಮಾಡ್ತಿದ್ದ.
ಈ ಪ್ರಕರಣ ಬೆಳಕಿಗೆ ಬಂದಿದ್ದೆ ರೋಚಕವಾಗಿದ್ದು ಮೈಸೂರಿನ ಪೆನ್ಷನ್ ಮೊಹಲ್ಲ ಪೊಲೀಸ್ರು ನಟೋರಿಯಸ್ ಕಳ್ಳನ ಬೆನ್ನು ಬಿದ್ದಿದ್ರು. ಈ ವೇಳೆ ಅತನ ಪಾಸ್ ಪೋರ್ಟ್ ಪತ್ತೆಯಾಗಿತ್ತು.ಅದರಲ್ಲಿ ಸಾದಿಕ್ ಪಾಷಾ ಬಸವನಗುಡಿ ಎಂಬ ವಿಳಾಸ ನೋಡಿ ವಿಚಾರಣೆ ನಡೆಸಿದಾಗ ಈ ರೀತಿಯವರು ಯಾರು ಇಲ್ಲ ಎನ್ನೋದು ಪತ್ತೆಯಾಗಿತ್ತು,
ಪೋಟೋ ಮಾತ್ರ ನಟೋರಿಯಸ್ ಕಳ್ಳ ಕರೀಂದು ಅನ್ನೋದು ಬಯಲಿಗೆ ಬಂದಾಗ ಬಸವನಗುಡಿ ಪೊಲೀಸ್ರು ಅಲರ್ಟ್ ಆಗಿ ಫೀಲ್ಡಿಗಿಳಿದಾಗ ಅಸಲಿ ಪ್ರಕರಣ ಆಳ ಅಗಲ ತಿಳಿದು ಬಂದಿದೆ.