Select Your Language

Notifications

webdunia
webdunia
webdunia
webdunia

ಎಫ್.ಎಂ. ರೈನ್ ಬೋ ದೇಶದ ಕೇಳುಗರ ಸಮೀಕ್ಷೆಯಲ್ಲಿ ಎರಡನೇ ಸ್ಥಾನ

ಎಫ್.ಎಂ. ರೈನ್ ಬೋ ದೇಶದ ಕೇಳುಗರ ಸಮೀಕ್ಷೆಯಲ್ಲಿ ಎರಡನೇ ಸ್ಥಾನ
ಬೆಂಗಳೂರು , ಗುರುವಾರ, 1 ಸೆಪ್ಟಂಬರ್ 2022 (16:28 IST)
ಎಫ್.ಎಂ. ರೈನ್ ಬೋ ದೇಶದ ಕೇಳುಗರ ಸಮೀಕ್ಷೆಯಲ್ಲಿ ಕಳೆದ ವರ್ಷ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು. ಇದಕ್ಕೆ ಎಲ್ಲಾ ಸಿಬ್ಬಂದಿ ಮತ್ತು ಆರ್.ಜೆ.ಗಳ ಪರಿಶ್ರಮ ಕಾರಣ. ಕಾರ್ಯಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಆಕಾಶವಾಣಿ ಕಾರ್ಯೋನ್ಮುಖವಾಗಿದೆ ಎಂದರು. ನೇಹ ಸ್ವಾಮಿ ಮಾತನಾಡಿ, ಎಲ್ಲರ ಶ್ರಮದ ಪ್ರತಿಫಲದಿಂದ ಎಂ.ಎಫ್ ರೈನ್ ಬೋ ಕೇಳುಗರ ಗಮನ ಸೆಳೆದಿದೆ. ಬರುವ ದಿನಗಳಲ್ಲಿ ಮತ್ತಷ್ಟು ರಚನಾತ್ಮಕ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸಿದರು. ಆಕಾಶವಾಣಿ ಕಾರ್ಯಕ್ರಮ ವಿಭಾಗದ ನಿರ್ವಾಹಕರಾದ ಡಾ. ಎ.ಎಸ್. ಶಂಕರನಾರಾಯಣ್ ಮಾತನಾಡಿ, ಕನ್ನಡ ಕಾಮನ ಬಿಲ್ಲು ಇಡೀ ದೇಶದಲ್ಲಿ ಅತ್ಯುತ್ತಮ ವಾಹಿನಿ ಎಂದು ಲೋಕಸಭೆಯಲ್ಲಿ ಶ್ಲಾಘನೆಗೆ ಒಳಗಾಗಿದೆ. ಈಗಲೂ ಅದೇ ಪರಂಪರೆ ಮುಂದುವರೆದಿದೆ. ಸಾರ್ಥಕವಾದ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು. ಎಫ್.ಎಂ. ರೈನೋ ಅಭಿಮಾನಿ ಮತ್ತು ಕೇಳುಗರಾದ ಇ. ನಾಗರಾಜ್ ಮಾತನಾಡಿ, 1978 ರಿಂದ ಆಕಾಶವಾಣಿಯನ್ನು ನಿರಂತರವಾಗಿ ಕೇಳುತ್ತಿದ್ದೇನೆ. ಎಫ್.ಎಂ. ರೈನ್ ಬೋ ಆರಂಭದಿಂದಲೂ ಆಲಿಸುತ್ತಿದ್ದೇನೆ. ಪ್ರತಿ ಆರು ತಿಂಗಳು ಇಲ್ಲವೆ ವರ್ಷಕ್ಕೊಮ್ಮೆ ಕೇಳುಗರ ಜೊತೆ ಸಂವಾದ ಏರ್ಪಡಿಸಿದರೆ ಇನ್ನಷ್ಟು ಗುಣಮಟ್ಟದ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು. ಯುವ ಪ್ತತಿಭಾವಂತ ಗಾಯಕರಾದ ಪ್ರಭಂಜನ್, ನೀರಜ್ ಮತ್ತು ನಿರಂತ್ ತಮ್ಮ ಸುಮಧುರ ಕಂಠದಿಂದ ರಂಜಿಸಿದರು.
ಆಕಾಶವಾಣಿ ಮತ್ತು ದೂರದರ್ಶನದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವರ್ಗಾವಣೆಯ ನಂತರ ಹೊಸ ಹುದ್ದೆ ನೀಡುವಂತೆ ಹೈಕೋರ್ಟ್ ಆದೇಶ