Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಈಶ್ವರಪ್ಪ ಪಿಎ ವಿನಯ್ ಮನೆಯಲ್ಲಿ ಕಳ್ಳತನ

Ex-minister Eshwarappa PA Vinay house burglary
bangalore , ಭಾನುವಾರ, 21 ಮೇ 2023 (14:00 IST)
ಮಾಜಿ ಸಚಿವ ಈಶ್ವರಪ್ಪ ಪಿಎ ವಿನಯ್ ಕುಟುಂಬ ಸಮೇತ ಅಮಾವಾಸ್ಯೆ ಪೂಜೆಗೆ ಕೇರಳಾಗೆ ಹೋಗಿದ್ರೆ. ಇತ್ತ ಅದೇ ಅಮಾವಾಸ್ಯೆ ರಾತ್ರಿ ಕಳ್ಳರು ಬೀಗ ಮುರಿದಿದ್ದಾರೆ. ಹಣ ಸಿಗಲಿಲ್ಲ ಅಂತ ದೇವರ ಮನೆಯಲ್ಲಿದ್ದ ಬೆಳ್ಳಿ ದೀಪ, ಕಳಸ ಸೇರಿದಂತೆ ಬೆಳ್ಳಿ ಪೂಜೆ ಸಮಾನಗಳನ್ನ  ಕಳ್ಳರು ದೋಚಿ ಪರಾರಿಯಾಗಿದ್ದಾರೆ.  ತಾವರೆಕೆರೆ ಪೊಲೀಸ್ ಠಾಣ ವ್ಯಾಪ್ತಿಯ ಕೊಡಿಗೆಹಳ್ಳಿಯಲ್ಲಿ ನಿನ್ನೆ ಘಟನೆ ನಡೆದಿದೆ. ಕಬ್ಬಿಣದ ಆಯುದದಿಂದ ಬಾಗಿಲು ಒಡೆದು ಕಳ್ಳರು ಒಳನುಗ್ಗಿದ್ದು ಇಡಿ ಮನೆಯ ಜಾಲಾಡಿದ್ದಾರೆ. ಕಬೋರ್ಡ್ ನಲ್ಲಿದ್ದ  ಚಿಲ್ಲರೆ ಹಣದ ಜೊತೆ ದೇವರ ಪೂಜೆ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ. ತಾವರಕೆರೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಎನ್ ಎಸ್ ವಿನಯ್ ಕೇರಳದಿಂದ ಇಂದು ನಗರಕ್ಕೆ ವಾಪಸ್ ಆಗಲಿದ್ದು ಇಂದು ಠಾಣೆಗೆ ತೆರಳಿ ದೂರು ನೀಡುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿದ್ದಿರುವ ಮರಗಳನ್ನ ತೆರವು ಮಾಡದ ಪಾಲಿಕೆ