Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಎರಡನೇ ಹಂತದ ಸಂಜೆ ಅಂಚೆ ಕಚೇರಿ ಸ್ಥಾಪನೆ

Establishment of second phase evening post office in the state
bangalore , ಶುಕ್ರವಾರ, 17 ಫೆಬ್ರವರಿ 2023 (20:13 IST)
ಇತ್ತೀಚಿಗೆ ಮೊಬೈಲ್ ಫೋನ್, ಲ್ಯಾಪ್ ಟಾಪ್ ನಂತಹ ಎಲೆಕ್ಟ್ರಾನಿಕ್ ಡಿವೈಸ್ ಗಳ ಬಳಕೆ ನಡುವೆಯೂ ಸಾಕಷ್ಟು ಮಂದಿ ಅಂಚೆ ಸೇವೆಗಳನ್ನು ಬಳಕೆ ಮಾಡ್ತಿದ್ದಾರೆ. ಅಂತಹ ಮತ್ತಷ್ಟು ಗ್ರಾಹಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಭಾರತೀಯ ಅಂಚೆ ಮಹತ್ವದ ಹೆಜ್ಜೆ ಇಟ್ಟಿದೆ, ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದು ಇಂದಿನಿಂದ ಹೊಸ ಸೇವೆ ನೀಡಲು ಅಂಚೆ ಇಲಾಖೆ ಮುಂದಾಗಿದೆ.ಭಾರತೀಯ ಅಂಚೆ ಸಂಸ್ಥೆ ಕೇಂದ್ರ ಸರ್ಕಾರದ ಅತಿ ದೊಡ್ಡ ಇಲಾಖೆ. ಇದರ ೧,೫೬,೦೦೦ ಅಂಚೆ ಕಛೇರಿಗಳು ದೇಶಾದ್ಯಂತ ಪ್ರತಿನಿತ್ಯ ಸೇವೆ ನೀಡ್ತೀವೆ. ದೇಶದ ಯಾವುದೇ ಮೂಲೆಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ. ಪತ್ರ ವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ, ಹಣ ವರ್ಗಾವಣೆ ಸೇರಿ ಹಲವು ಸೇವೆ ನೀಡುತ್ತಿದೆ. ಹೀಗಾಗಿ ಗ್ರಾಹಕರ ಮತ್ತೊಂದು ಬೇಡಿಕೆಯನ್ನು  ಪೋಸ್ಟ್ ಡಿಪಾರ್ಟ್ಮೆಂಟ್ ಈಡೇರಿಸಿದೆ .ಅದೇ ಸಂಜೆ ಅಂಚೆ ಕಚೇರಿ..

ಸಾಕಷ್ಟು ದಿನಗಳಿಂದ ಸಾರ್ವಜನಿಕರಿಂದ ಸಂಜೆ ಅಥವಾ ಅಂಚೆ ಕಛೇರಿಯ ಸಮಯ ವಿಸ್ತರಣೆ ಬಗ್ಗೆ ಮನವಿಗಳು ದಾಖಲಾಗಿದ್ದವು. ಬೇಡಿಕೆಯ ಕಾರಣ ಬೆಂಗಳೂರಿನಲ್ಲಿ ಸಂಜೆ ಕಚೇರಿಯನ್ನು ತೆರೆಯಲು ಅಂಚೆ ಇಲಾಖೆ ನಿರ್ಧಾರಿಸಿದೆ. ಅದರಂತೆ  ನಿನ್ನೆ ನಗರದ ಮ್ಯೂಸಿಯಂ ರಸ್ತೆಯಲ್ಲಿನ ಪೋಸ್ಟ್ ನಲ್ಲೇ ಸಂಜೆ ಆಫೀಸನ್ನ ಆರಂಭಿಸಲಾಗಿಲಿದೆ.. ಸದ್ಯ ಈಗ ಜನರಲ್ ಪೋಸ್ಟ್ ಆಫೀಸ್ ಮತ್ತು ರೈಲ್ ಮೇಲ್ ಸರ್ವೀಸ್ ಪೋಸ್ಟ್ ಆಫೀಸ್ ಹೊರತುಪಡಿಸಿ, ನಗರದ ಉಳಿದ ಅಂಚೆ ಕಚೇರಿಗಳು ಮಧ್ಯಾಹ್ನ ೩ ಗಂಟೆಗೆ ಕ್ಲೋಸ್ ಆಗುತ್ತಿವೆ. ಅನೇಕ ಜನರು ಪಾರ್ಸೆಲ್ ಅನ್ನು ಸಿದ್ಧಪಡಿಸಿ ಕಳುಹಿಸಲು ಕಚೇರಿಯನ್ನು ತಲುಪುವ ಹೊತ್ತಿಗೆ, ಬಹುತೇಕ ಅಂಚೆ ಕಚೇರಿಗಳು ಕ್ಲೋಸ್ ಆಗೊದ್ರಿಂದ ಗ್ರಾಹಕರು ಸೇವೆ ಪಡೆಯಲು ಸಾಧ್ಯ ಆಗ್ತಿಲ್ಲ. ಹೀಗಾಗಿ ಸಂಜೆ ಅಂಚೆ ಕಚೇರಿ ತೆರೆದಿದೆ. 

ಇನ್ನೂ ೨೦೨೨ರ ನವೆಂಬರ್ ಮಧ್ಯದಲ್ಲಿ ಧಾರವಾಡದಲ್ಲಿ ಮೊದಲ ಕಚೇರಿಯನ್ನು ಪ್ರಾರಂಭಿಸಿದ ನಂತರ ಇದು ರಾಜ್ಯದಲ್ಲಿ ಎರಡನೇ ಅಂತಹ ಕಚೇರಿಯಾಗಲಿದೆ. ಈಗಾಗಲೇ ಧಾರವಾಡದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ ಬೆನ್ನಲ್ಲೆ, ಬೆಂಗಳೂರಿಗೂ ಈ ಸೇವೆ ನೀಡಲು ಪ್ಲ್ಯಾನ್ ಮಾಡಲಾಗಿದ್ದು. ಸದ್ಯ ಇಲ್ಲಿನ ಬೇಡಿಕೆಗೆ ಅನುಗುಣವಾಗಿ ನಗರದ ಬೇರೆ ಭಾಗ ಮತ್ತು ಇತರೆ ಜಿಲ್ಲೆಗಳಲ್ಲೂ ಸ್ಥಾಪಿಸುವ ನಿಟ್ಟನಲ್ಲಿ ಚಿಂತನೆ ಮಾಡಲಾಗಿದೆ.ಟ್ಟಾರೆ ಅಂಚೆ ಸೇವೆಗಳನ್ನು ರೆಗುಲರ್ ಆಗಿ ಬಳಸುವ ಗ್ರಾಹಕರಿಗೆ ಇದು ಸಿಹಿ ಸುದ್ದಿಯೇ ಸರಿ.  ಇದೇ ರೀತಿ ಮತ್ತಷ್ಟು ಸ್ಥಳಗಳಲ್ಲಿ ಸಂಜೆ ಅಂಚೆ ಕಚೇರಿ ಓಪನ್ ಆದರೆ ಇನ್ನಷ್ಟು ಬಳಕೆದಾರರಿಗೆ ಅನೂಕೂಲ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಬಜೆಟ್ ಮಂಡನಗೆ ಕೈ ನಾಯಕರು ವಿಬಿನ್ನ ರೀತಿ ಲೇವಡಿ