Publish Date: Fri, 17 Feb 2023 (20:01 IST)
Updated Date: Fri, 17 Feb 2023 (20:03 IST)
ಪಂಚಮಸಾಲಿ ಸಮುದಾಯವನ್ನು 2 ಎ ಸೇರ್ಪಡೆ ಮಾಡುವಂತೆ ಒತ್ತಾಯಿಸಿ, ಕಳೆದ 34 ದಿನಗಳಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಈ ಪ್ರತಿಭಟನೆಗೆ ಸಾತ್ ನೀಡಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಮಾತನಾಡಿದ ಇವರು
ಪಂಚಾಮಸಾಲಿ ಸಮುದಾಯ ದೊಡ್ಡ ಮಟ್ಟದಲ್ಲಿ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದೆ ಉಳಿದಿರುವುದನ್ನ ನಾನು ನೋಡಿದ್ದೇನೆ.
ದೇವೆಗೌಡ್ರು ಮುಖ್ಯ ಮಂತ್ರಿಗಳು ಆದಾಗಿನಿಂದಲೂ ನಾನು ಇವರ ಸಮುದಾಯದ ಬಗ್ಗೆ ಅರಿತಿದ್ದೇನೆ.
ಸಮಾಜದ ಒಳತಿಗಾಗಿ ಮಾಡುತ್ತಿರುವ ಹೋರಾಟವನ್ನ ಶ್ಲಾಘಿಸಬೇಕು.ಸಧ್ಯ ಮಖ್ಯಮಂತ್ರಿಗಳನ್ನ ನಂಬಿ ಅವರು ಮೋಸ ಹೋಗಿದ್ದಾರೆ.ನಾವು ಪ್ರಮಾಣಿಕವಾಗಿ ಈ ಸಮುದಾಯದ ಜೊತೆ ಇರುತ್ತೇವೆ. ನಾವು ಸಹ ವ್ಯಾವಸಾಯವನ್ನ ನಂಬಿ ಬದುಕುತ್ತಿರುವವರು,ಈ ಸಮುದಾಯದವರು ಸಹ ಭೂಮಿಯನ್ನ ನಂಬಿ ಬದುಕುತ್ತಿದ್ದಾರೆ,ಇತ್ತೀಚಿಗೆ ರಾಜಾಕಾರಣಿಗಳು ಮತಕ್ಕೋಸ್ಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ .ಲಕ್ಷಂತರ ಜನ ಪಂಚಾಮಸಾಲಿ ಹೋರಾಟದ ಜೊತೆಯಾಗಿ ನಿಂತಿದ್ದಾರೆ,ಹೋರಟಾದ ವೇಳೆ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಚುನಾವಣೆಯ ನಂತರ ನಿಮಗೆ ಬೇಕಾದ ಸೌಲಭ್ಯಗಳು ದೊರೆಯಲಿವೆ,ನಾನು ನಿಮ್ಮ ಸಮುದಾಯಕ್ಕೆ ಕೈ ಜೋಡಿಸುತ್ತೇನೆ, ಎಂದು ಪಂಚಮಸಾಲಿ ಸಮುದಾಯದ ಪ್ರತಿಭಟನೆಗೆ ಹೆಚ್. ಡಿ.ಕೆ ಸಾತ್ ನೀಡಿದ್ದಾರೆ.