Publish Date: Fri, 17 Feb 2023 (09:38 IST)
Updated Date: Fri, 17 Feb 2023 (10:00 IST)
ಚಾಮರಾಜನಗರ : ಚಿತ್ರರಂಗದ ಬಗ್ಗೆ ಯಾರೋ ಹಗುರವಾಗಿ ಮಾತನಾಡಿದ್ದಾರೆ. ಸಿನಿಮಾವನ್ನು ಶೋಕಿ ಎಂದು ಕರೆದಿದ್ದಾರೆ. ಚಿತ್ರರಂಗ ಶೋಕಿಯ ಕ್ಷೇತ್ರವಲ್ಲ.
ಅದು ನನ್ನ ಫ್ಯಾಷನ್. ನಾನು ಇದುವರೆಗೆ ನಟಿಸಿದ ಸಿನಿಮಾಗಳಲ್ಲಿ ಲಾಂಗು, ಮಚ್ಚು ಹಿಡಿದಿಲ್ಲ ಎಂದು ನಟ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಒಂದು ಸಿನಿಮಾ ಮಾಡಲು ಸಾಕಷ್ಟು ದಿನ ಕಷ್ಟಪಡುತ್ತೇವೆ. ನಾನು ಮುಂದೆಯು ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾ ಮಾಡುತ್ತೇನೆ. ಸಮಾಜಕ್ಕೆ ಸಂದೇಶ ಕೊಡುವ ಸಿನಿಮಾ ಮಾಡುತ್ತೇನೆ.