Select Your Language

Notifications

webdunia
webdunia
webdunia
webdunia

ಹಾಸನ ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ದಾಂಧಲೆ

ಹಾಸನ ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ದಾಂಧಲೆ
ಹಾಸನ , ಶುಕ್ರವಾರ, 17 ಫೆಬ್ರವರಿ 2023 (19:53 IST)
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದ್ದು, ಕಾಡಾನೆಗಳ ದಾಳಿಗೆ ವಿದ್ಯುತ್ ಕಂಬಗಳು, ಟ್ರಾನ್ಸ್‌‌ಫಾರ್ಮರ್ ನೆಲಕ್ಕುರುಳಿವೆ. ಸಕಲೇಶಪುರ ತಾಲೂಕಿನ ನೀಚನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಫಿ ಸೇರಿದಂತೆ ಅಪಾರ ಪ್ರಮಾಣದ ಬೆಳೆಯನ್ನ ಕಾಡಾನೆ ನಾಶ ಮಾಡಿದೆ. ಕಾಡಾನೆ ಬಗ್ಗೆ ಮಾಹಿತಿ ನೀಡಿದ್ರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಬಂದಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ವಿದ್ಯುತ್ ತಂತಿ ರಸ್ತೆಯ ಮೇಲೆಯೇ ಬಿದ್ದಿದೆ. ಅನಾಹುತ ಸಂಭವಿಸುವ ಮುನ್ನವೇ ದುರಸ್ತಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಕಾಕನಮನೆ ಸಮೀಪ ಗಜಪಡೆ ಬೀಡುಬಿಟ್ಟಿದ್ದು, ಎಚ್ಚರಿಕೆಯಿಂದ ಓಡಾಡುವಂತೆ ಮೈಕ್ ಮೂಲಕ ಅನೌನ್ಸ್​​ಮೆಂಟ್​​ ಮಾಡಲಾಗಿದೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಮಲೆನಾಡು ಭಾಗದ ಜನ ಹೈರಾಣಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಳಂದ ಪಟ್ಟಣದಲ್ಲಿ ಪೊಲೀಸರ ಹದ್ದಿನ ಕಣ್ಣು