ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ 41 ಸಾವಿರ ಗಡಿ ದಾಟಿದೆ. ದಿನ ಕಳೆದಂತೆ ಮೃತರ ಸಂಖ್ಯೆ ಹೆಚ್ಚುತ್ತಿದೆ ಯುದ್ದಪೀಡಿತ ತೀವ್ರ ಕೆಟ್ಟ ಸ್ಥಿತಿಯಲ್ಲಿರುವ ಸಿರಿಯಾದಲ್ಲಿ ಸಾವಿನ ಲೆಕ್ಕ ಸಿಗುತ್ತಿಲ್ಲ. ಅದೃಷ್ಟವೆಂಬಂತೆ ಕಟ್ಟಡ ಅವಶೇಷಗಳಡಿ ಹುದುಗಿಹೋಗಿ 8-9 ದಿನಗಳಾದರೂ ಹಲವರು ಜೀವಂತ ಸಿಕ್ಕಿರುವ ಘಟನೆಗಳು ನಡೆಯುತ್ತಿವೆ. ಹವಾಮಾನ ವೈಪರಿತ್ಯದ ನಡುವೆಯೂ ರಕ್ಷಣಾ ಕಾರ್ಯಾಚರಣೆಯ ಉತ್ಸಾಹವನ್ನು ತುಸು ಹೆಚ್ಚಿಸಿದೆ. ನಿನ್ನೆ ಕಟ್ಟಡಗಳ ಅವಶೇಷಗಳಡಿಯಲ್ಲಿ 6ಕ್ಕೂ ಹೆಚ್ಚು ಜನರು ಜೀವಂತ ಸಿಕ್ಕಿದ್ದಾರೆ. ಇದರಲ್ಲಿ 65 ವರ್ಷದ ಒಬ್ಬ ವೃದ್ಧ ಹಾಗೂ ಒಬ್ಬ ಪುಟ್ಟ ಬಾಲಕಿಯೂ ಸೇರಿದ್ದಾರೆ. ಸಿರಿಯಾದ ಅಂಟಾಕ್ಯಾದಲ್ಲಿ ತಾಯಿ, ಮಕ್ಕಳನ್ನು ರಕ್ಷಿಸಲಾಗಿದೆ. ಸಿರಿಯಾದಲ್ಲಿ 5,800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸಿರಿಯಾ ಸರ್ಕಾರ ಮತ್ತು ವಿಶ್ವಸಂಸ್ಥೆ ಹೇಳಿದೆ.