Publish Date: Tue, 18 Apr 2023 (21:20 IST)
Updated Date: Tue, 18 Apr 2023 (20:10 IST)
ಬಿಜೆಪಿ ಮೂರು ಪಟ್ಟಿಯಲ್ಲೂ ಮಹಿಳೆಯರಿಗೆ ಟಿಕೆಟ್ ನೀಡಿದೆ.. ಇನ್ನೂ ಎರಡು ಕ್ಷೇತ್ರಗಳು ಬಾಕಿ ಉಳಿದಿದ್ದು, ಕೊನೆಯ ಪಟ್ಟಿಯಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಸೊಸೆಗೆ ಟಿಕೆಟ್ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪಕ್ಷದ ನಾಯಕರ ಸೂಚನೆಗೆ ಈಶ್ವರಪ್ಪ ಕಾಯುತ್ತಿದ್ದಾರೆ.. ಮಗ ಕಾಂತೇಶ್ಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಬಯಸಿದ್ದಾರೆ.. ಆದರೆ, ಹೈಕಮಾಂಡ್ ಈಶ್ವರಪ್ಪ ಸೊಸೆ ಶಾಲಿನಿಗೆ ಟಿಕೆಟ್ ಕೊಡುವ ಸಾಧ್ಯತೆ ಇದೆ.. ನಾನು ನ್ಯಾಯಯುತವಾಗಿ ಹೊರಗಡೆ ಬಂದಿರುವೆ.. ಸದ್ಯ ನನ್ನ ಕ್ಷೇತ್ರವನ್ನ ನಮ್ಮವರಿಗೆ ಕೊಡಿ ಎಂದು ಈಶ್ವರಪ್ಪ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದಾರೆ.. ಹೀಗಾಗಿ ಈಶ್ವರಪ್ಪ ಸೊಸೆಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವ ಸಾಧ್ಯತೆ ಇದೆ