Select Your Language

Notifications

webdunia
webdunia
webdunia
webdunia

ರಾಜ್ಯದ 70 ಕ್ಷೇತ್ರಗಳಲ್ಲಿ ಸಿದ್ದು ಸಂಚಾರ

ರಾಜ್ಯದ 70 ಕ್ಷೇತ್ರಗಳಲ್ಲಿ ಸಿದ್ದು ಸಂಚಾರ
bangalore , ಮಂಗಳವಾರ, 18 ಏಪ್ರಿಲ್ 2023 (19:40 IST)
ಇನ್ನೇನು ವಿಧಾನಸಭಾ ಚುನಾವಣೆಗೆ ಕೇವಲ 20 ದಿನ ಮಾತ್ರ ಬಾಕಿ ಉಳಿದಿದ್ದು, ಕರ್ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಿಂಚಿನ ಸಂಚಾರಕ್ಕೆ ಸಜ್ಜಾಗಿದ್ದಾರೆ. ರಾಜ್ಯದ 70 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಸಿದ್ದರಾಮಯ್ಯ ಸಿದ್ದರಾಮಯ್ಯ ತಯಾರಿಯಾಗಿದ್ದಾರೆ. ಒಂದು ದಿನಕ್ಕೆ 4 ಕ್ಷೇತ್ರಗಳಲ್ಲಿ ಕ್ಯಾಂಪೇನ್‌ ಮಾಡಲಿದ್ದು, ಪ್ರಚಾರಕ್ಕಾಗಿಯೇ ವಿಶೇಷ ಹೆಲಿಕಾಪ್ಟರ್‌ ಬುಕ್‌ ಮಾಡಿದ್ದಾರೆ. ಆಯ್ಕೆಯ 70 ಕ್ಷೇತ್ರಗಳಲ್ಲಿ ಅಲ್ಲಿನ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ರೋಡ್ ಶೋ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆ ಹಾಕಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಿದ್ದು ಕಸರತ್ತು